ಮೈಸೂರು ಪಾಕ್ ಮೇಲೆ ತಮಿಳರ ವಕ್ರದೃಷ್ಟಿ

ಮೈಸೂರು ಪಾಕ್ ಮೇಲೆ ತಮಿಳರ ವಕ್ರದೃಷ್ಟಿ

ಬೆಂಗಳೂರು, ಸೆ. 16: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಭಾರೀ ವಿವಾದ ತಲೆದೋರಿರುವ ನಡುವೆಯೇ ರಾಜ್ಯದ ಸಾಂಸ್ಕೃತಿಕ ನಗರಿಯ ಹೆಗ್ಗುರುತಾದ ಮೈಸೂರು ಪಾಕ್ ಮೇಲೂ ತಮಿಳುನಾಡಿನ ವಕ್ರದೃಷ್ಟಿ ಬಿದ್ದಿದೆ.

ವಿಶ್ವವಿಖ್ಯಾತ ಮೈಸೂರು ಪಾಕ್ ಗೆ ಭೌಗೋಳಿಕ ಗುರುತು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಅತ್ಯಂತ ರುಚಿಕರವಾದ ಸಿಹಿತಿನಿಸು ತಮಿಳುನಾಡು ಮೂಲದ್ದೆಂದು ಕೇಂದ್ರ ಸರ್ಕಾರದ ಏಕಸದಸ್ಯ ಸಮಿತಿಯೊಂದು ಮುಂದಾಗಿರುವುದು ಕರುನಾಡಿನ ಜನತೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಮೈಸೂರು ಪಾಕ್ ಮೈಸೂರಿನ ಜಗತ್ಪ್ರಸಿದ್ಧ ಸಿಹಿತಿನಿಸು ಎಂಬುದಕ್ಕೆ ಬಹುಹಿಂದಿನಿಂದಲೂ ಸಾಕಷ್ಟು ಪುರಾವೆ, ಸಾಕ್ಷ್ಯಾಧಾರಗಳಿವೆ. ಹೀಗಿರುವಾಗ ಕೇಂದ್ರ ಸರ್ಕಾರದ ವಿತಂಡವಾದ ಕನ್ನಡಿಗರನ್ನು ಕೆರಳಿಸಿದೆ. ಹೆಸರೆ ಹೇಳುವಂತೆ ಇದು ಮೈಸೂರಿನ ಸಿಹಿತಿಂಡಿ ಹೀಗಿರುವಾಗ ತಮಿಳುನಾಡಿನ ಹೆಸರು ಇದರೊಂದಿಗೆ ಹೇಗೆ ಸಾಧ್ಯ ಎಂಬುದು ಕನ್ನಡ ಜನತೆಯ ಪ್ರಶ್ನೆಯಾಗಿದೆ. ಯಾವ ಆಧಾರದ ಮೇಲೆ ಮೈಸೂರು ಪಾಕ್ ಗೆ ತಮಿಳುನಾಡಿ ಭೌಗೋಳಿಕ ಐಡೆಂಟಿಟಿ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದಕ್ಕೆ ಇರುವ ಪುರಾವೆಯಾದರೂ ಏನು ಎಂಬ ಪ್ರಶ್ನೆ ಎದ್ದಿದೆ.

ಮೈಸೂರು ಪಾಕ್ ವಿಶೇಷತೆ: ಮೈಸೂರು ಅರಸರ ಕಾಲದಲ್ಲೇ ಮೈಸೂರು ಪಾಕ್ ತಯಾರಿಗೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಈ ಸಿಹಿತಿಂಡಿ ನಿರ್ಮಾಣವಾಗಿದ್ದು, ಒಂದು ಕುತೂಹಲಕಾರಿ ಸಂದರ್ಭದಲ್ಲಿ.

ಜಯಚಾಮರಾಜೇಂದ್ರ ಅವರ ತಾತ ಒಂದು ದಿನ ಭೋಜನಕ್ಕೆ ವಿಶೇಷ ತಿನಿಸು ತಯಾರಿಸುವಂತೆ ಪಾಕಶಾಲೆಯ ಬಾಣಸಿಗರಿಗೆ ತಿಳಿಸಿದ್ದರು, ಸಿಹಿತಿನಿಸನ್ನು ತಯಾರಿ ಮಾಡಲು ಸಾಕಷ್ಟು ಕಾಲವಕಾಶ ಇರಲಿಲ್ಲ, ಪಾಕಪ್ರವೀಣರು ಕಡಲೆಹಿಟ್ಟಿಗೆ ಧಾರಾಳವಾಗಿ ಶುದ್ಧ ತುಪ್ಪ ಬೆರೆಸಿ ಚೆನ್ನಾಗಿ ಕುದಿಸಿ ಹದವಾದ ಪಾಕ ತೆಗೆದರು.

ಭೋಜನಕ್ಕೆ ಕುಳಿತ ಅರಸರು ಮತ್ತು ರಾಜ ಪರಿವಾರ ಸಿಬ್ಬಂದಿ ಹೊಸ ಸಿಹಿತಿನಿಸಿನ ಪರಿಮಳ, ಸ್ವಾದಕ್ಕೆ ಮಾರು ಹೋದರು. ಪಾಕಶಾಲೆ ಬಾಣಸಿಗರನ್ನು ಕರೆದು ಇದು ಯಾವ ಸಿಹಿತಿಂಡಿ, ಹೆಸರೇನು ಎಂದು ಕೇಳಿದರು.

ಸಿಹಿತಿಂಡಿ ತಯಾರಿಸಿದ ಅಡುಗೆಭಟ್ಟರಿಗೆ ಯಾವ ಹೆಸರಿಡಬೇಕೆಂದು ಹೊಳೆಯಲಿಲ್ಲ. ಅರಸರ ಪ್ರಶ್ನೆ ತಡಬಡಾಯಿಸಿದ ಬಾಣಸಿಗನೊಬ್ಬ, ದೊರೆಗಳೆ ಇದು ಮೈಸೂರು ಪಾಕ ಎಂದು ಮನಸ್ಸಿಗೆ ಬಂದ ಉತ್ತರ ಹೇಳಿ ಜಾರಿಗೊಂಡ. ಆಂದಿನಿಂದ ಮೈಸೂರು ಪಾಕ್ ಎಂದು ಜಗದ್ವಿಖ್ಯಾತಿ ಪಡೆದಿದೆ.

ಕರ್ನಾಟಕದ ಸಾಂಪ್ರದಾಯಿಕ  ಸಿಹಿ ತಿನಿಸು ಮೈಸೂರು ಪಾಕು ತನ್ನ ಮೂಲದೆಂದು ವಾದಿಸುತ್ತಿರುವ ತಮಿಳನಾಡಿಗೆ ಬೆಂಬಲ ನೀಡುತ್ತಿರುವ ಕೇಂದ್ರದ ವಿರುದ್ಧ ಕನ್ನಡಿಗರ ಆಕ್ರೋಶ ಭುಗಿಲೆದ್ದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos