ಪ್ರತಿಭೆಗೆ ಪ್ರೋತ್ಸಾಹದ ಅಗತ್ಯವಿದೆ

ಪ್ರತಿಭೆಗೆ ಪ್ರೋತ್ಸಾಹದ ಅಗತ್ಯವಿದೆ

ದೇವನಹಳ್ಳಿ: ಕ್ರೀಡೆಗಳು ಗ್ರಾಮೀಣ ಭಾಗದ ಯುವಜನತೆಗೆ ಮನರಂಜನೆಯ ಜೊತೆಗೆ ಉತ್ತಮ ದೈಹಿಕ ಚಟುವಟಿಕೆಯೂ ಆಗಿದೆ. ಇಂತಹ ಹವ್ಯಾಸಗಳು ಯುವಜನತೆಯನ್ನು ದುಶ್ಚಟಗಳಿಂದ ದೂರ ಇಡಲು ಸಹಕಾರಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಸಮೀಪದ ಎ. ರಂಗನಾಥಪುರದಲ್ಲಿ ಎಆರ್ ಪಿ ಸ್ಮಾಷರ್ಸ್ ವತಿಯಿಂದ 2020-21 ನೇ ಸಾಲಿನಲ್ಲಿ ಎರಡನೇ ಬಾರಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಪ್ರತಿಭೆಯ ಅನಾವರಣಕ್ಕೆ ಸಹಕಾರ ನೀಡಬೇಕು. ವರ್ಷಕ್ಕೆ 4 ಕ್ರಿಕೆಟ್ ಪಂದ್ಯಾವಳಿಗಳನ್ನಾದರೂ ಏರ್ಪಡಿಸಬೇಕು. ಕ್ರೀಡಾಪಟುಗಳನ್ನು ಉತ್ತೇಜಿಸಬೇಕು.ಗ್ರಾಮದಲ್ಲಿ ಕ್ರೀಡಾಂಗಣ ಇಲ್ಲ. ಆದರೂ ಕಾನೂನು ಬದ್ಧವಾಗಿ ಪಂಚಾಯತಿ ಅನುಮತಿ ಪಡೆದು ಒಂದು ಸ್ಥಳವನ್ನು ಕ್ರೀಡಾಂಗಣದ ರೀತಿ ಸಿದ್ಧಪಡಿಸಿಕೊಂಡು ಆಡುತ್ತಿದ್ದಾರೆ. ಸುತ್ತಮುತ್ತಲ ಗ್ರಾಮ ಮತ್ತು ಪಟ್ಟಣಗಳ ಒಟ್ಟು 30 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 40 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 20 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡುತ್ತಿದ್ದೇವೆ.

ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮುನಿನರಸಿಂಹಯ್ಯ, ಗೊಡ್ಲು ಮುದ್ದೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಬಿ.ಚೇತನ್ ಗೌಡ, ಮುಖಂಡರಾದ ರಾಮಚಂದ್ರಪ್ಪ ಮತ್ತು ಎ.ಆರ್.ಪಿ ಸ್ಮಾಷರ್ಸ್ ತಂಡದ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos