ತಬಲಾ ತರಗತಿ ಆರಂಭ

ತಬಲಾ ತರಗತಿ ಆರಂಭ

ಟಿ.ದಾಸರಹಳ್ಳಿ: ಮಕ್ಕಳು ಶ್ರದ್ಧೆ, ಶಿಸ್ತು, ಸಂಸ್ಕಾರ ರೂಡಿಸಿಕೊಂಡು ಕಲಿಯಬೇಕೆಂಬ ಛಲ ಬಂದಾಗ ಕಲಿತು ಯಶಸ್ವಿಯಾಗಬಲ್ಲರು ‘ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ. ಬಿ. ಹೆಚ್ ಜಯದೇವ್ ಹೇಳಿದರು.
ಮಲ್ಲಸಂದ್ರದ ಕನ್ನಡ ಕಲಾಲಯದಲ್ಲಿ ನೂತನವಾಗಿ ಆರಂಭವಾದ ಸಂಗೀತ ಶಾಲೆ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ವಿಷಯದಲ್ಲಿ ಯಾವುದರಲ್ಲಿ ಆಸಕ್ತಿ ಇದೆ ಎಂಬುದನ್ನು ಅರಿತು ಪ್ರೋತ್ಸಾಹ ನೀಡಬೇಕು ಎಂದರು.
ಗಾಯಕ ಸುಬ್ರಹ್ಮಣ್ಯ ಮಾತನಾಡಿ ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಸಂಗೀತ, ನೃತ್ಯ, ಗಾಯನ ಶಾಲೆಗಳು ಮುಖ್ಯ ಎಂದರು. ಶಾಲೆಯ ಸಂಸ್ಥಾಪಕ ತರುಣ್ ಕನ್ನಡಿಗ ಮಾತನಾಡಿ ನಮ್ಮ ಶಾಲೆಯಲ್ಲಿ ನೃತ್ಯ, ಸಂಗೀತ, ಗಾಯನ, ಕೊಳಲು ವಾದನ ಮುಂತಾದ ತರಗತಿಗಳು ಪ್ರಾರಂಭವಾಗಲಿದೆ ಇಂತಹ ಕಲೆಗಳ ಕಲಿತರೆ ಮಕ್ಕಳಿಗೆ ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ’ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos