ಸುಷ್ಮಾ ಸ್ವರಾಜ್ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ರು

ಸುಷ್ಮಾ ಸ್ವರಾಜ್ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ರು

ನವದೆಹಲಿ, ಆ. 7: ಮಾಜಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​​ ಅವರು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 67  ವರ್ಷದ ಬಿಜೆಪಿ ಕಟ್ಟಾಳ ನೆನ್ನೆ ರಾತ್ರಿ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಮ್ಮನಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಸುಷ್ಮಾ ಸ್ವರಾಜ್​​ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

ಸುಷ್ಮಾ ಸ್ವರಾಜ್ ಗೆ 67 ವರ್ಷ ವಯಸ್ಸಾಗಿತ್ತು. ಫೆಬ್ರವರಿ 14,1953 ರಂದು ಸುಷ್ಮಾ ಸ್ವರಾಜ್ ಜನಿಸಿದ್ದರು. ಹರ್ಯಾಣದ ಅಂಬಾಲಾ ಕ್ಯಾಂಟ್ ನಲ್ಲಿ ಜನಿಸಿದ್ದರು.

ಸುಷ್ಮಾ ಸ್ವರಾಜ್ ತಂದೆ ಹರ್ದೇವ್ ಶರ್ಮಾ, ಆರ್ ಎಸ್ ಎಸ್ ನಲ್ಲಿದ್ದವರು. ಸಂಘಟನೆಯೊಂದಿಗೆ ಅವ್ರು ಒಳ್ಳೆ ಸಂಬಂಧ ಹೊಂದಿದ್ದರು. ವಿದ್ಯಾಭ್ಯಾಸ ಮುಗಿಸಿ ಸುಪ್ರೀಂ ಕೋರ್ಟ್ ವಕೀಲೆಯಾಗಿ ಕೆಲಸ ಮಾಡಿದ್ದ ಸುಷ್ಮಾ ಸ್ವರಾಜ್, ಅವ್ರ ರಾಜಕೀಯ ಜೀವನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ಶುರುವಾಗಿತ್ತು. ಅಧ್ಯಯನದ ಜೊತೆ ಶಾಸ್ತ್ರೀಯ ಸಂಗೀತ, ಲಲಿತಕಲೆ ಮತ್ತು ನಾಟಕ ಇತ್ಯಾದಿಗಳಲ್ಲಿ ಸುಷ್ಮಾ ಸ್ವರಾಜ್ ಆಸಕ್ತಿ ಹೊಂದಿದ್ದರು.

1975ರಲ್ಲಿ ಸುಷ್ಮಾ ಸ್ವರಾಜ್ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಸ್ವರಾಜ್ ಕೌಶಲ್ ಮದುವೆಯಾದ್ರು. ಸ್ವರಾಜ್ ಕೌಶಲ್, ಮೂರು ವರ್ಷಗಳ ಕಾಲ ಮಿಜೋರಾಂ ರಾಜ್ಯಪಾಲರಾಗಿ ಕೆಲಸ ಮಾಡಿದ್ದಾರೆ. ಸುಷ್ಮಾ ಸ್ವರಾಜ್ ಮಗಳು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ ತಂದೆಯಂತೆ ಕ್ರೈಂ ಲಾಯರ್ ಆಗಿ ಕೆಲಸ ಮಾಡ್ತಿದ್ದಾರೆ.

ರಾಜಕೀಯದಲ್ಲಿ ಸಾಕಷ್ಟು ಹೆಸ್ರು ಮಾಡಿದ್ದ ಸುಷ್ಮಾ ಸ್ವರಾಜ್, ವಿದೇಶಿ ಮಂತ್ರಿ ಪಟ್ಟವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಎಲ್ಲರ ಅಚ್ಚುಮೆಚ್ಚಿನ ವಿದೇಶಾಂಗ ಸಚಿವೆಯಾಗಿದ್ರು ಸುಷ್ಮಾ ಸ್ವರಾಜ್. ಪಕ್ಷ, ಸಚಿವ ಸ್ಥಾನ, ಪತಿ ಹಾಗೂ ಮಗಳ ಬೆಳವಣಿಗೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದವರು ಸುಷ್ಮಾ ಸ್ವರಾಜ್. ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನೂ ಸುಷ್ಮಾ ಸ್ವರಾಜ್ ಹಂಚಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos