ಶರಣ ಸಂಸ್ಕ್ರತಿ ಮೇಳ

ಶರಣ ಸಂಸ್ಕ್ರತಿ ಮೇಳ

ಅಥಣಿ, ಫೆ. 19:  ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಎಲ್ಲ ಜನಸಮುದಾಯದ ಸಹಕಾರದೊಂದಿಗೆ ಹತ್ತು ಹಲವಾರು ವರ್ಷಗಳಿಂದ ಅಥಣಿಯಲ್ಲಿ ಶರಣ ಸಂಸ್ಕೃತಿ ಉತ್ಸವವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿರುವುದು ಅಥಣಿಯ ಹೆಮ್ಮೆಯ ಸಂಗತಿಯಾಗಿದೆ. ಇದೆ 18 ರಿಂದ 23 ರವರೆಗೆ  ಅಥಣಿಯ ಸಾಂಸ್ಕೃತಿಕ ಹಬ್ಬವಾದ ಅಥಣಿ ಗಚ್ಚಿನಮಠದ ಶರಣ ಸಂಸ್ಕೃತಿ ಉತ್ಸವ ಜರುಗಲಿದೆ. ಪ್ರತಿ ವರ್ಷ ಜರುಗುವ ಈ ಕಾರ್ಯಕ್ರಮ ಜನಮನದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಗಚ್ಚಿನ ಮಠದ ಪರಮಪೂಜ್ಯ ಶಿವಬಸವ ಸ್ವಾಮೀಜಿ ಹೇಳಿದ್ದಾರೆ .

ಅವರು ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜರುಗುವ ಶರಣ ಸಂಸ್ಕೃತಿ 2020ರ ಉತ್ಸವದ ನಿಮಿತ್ಯ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೆಶಿಸಿ ಮಾತನಾಡುತ್ತಿದ್ದರು. ಶರಣ ಪರಂಪರೆಯ ತತ್ವಾದರ್ಶಗಳ ಆದ ಕಾಯಕ-ದಾಸೋಹ ಅನ್ನದಾಸೋಹ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿದ ಕೀರ್ತಿ ಗಚ್ಚಿನ ಮಠಕ್ಕೆ ಸಂಸ್ಕೃತಿ ಪರಂಪರೆಯನ್ನುಗಚ್ಚಿನಮಠದಲ್ಲಿ ಸಂಸ್ಕೃತಿಯ ಕ್ರಾಂತಿಯನ್ನು ಮತ್ತೊಮ್ಮೆ ಬೆಳಕಿಗೆ ತಂದವರು ಅಧ್ಯಕ್ಷರಾದ ಶಿವಮೂರ್ತಿ ಮುರುಘಾಶರಣರು ಶ್ರೀಮಠದ ಅಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆಯಲ್ಲಿ ಪ್ರತಿವರ್ಷವೂ ಗಚ್ಚಿನಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಅರ್ಥಪೂರ್ಣವಾಗಿ  ಜರುಗುತ್ತಿದೆ.

ದಿ. 20 ರಂದು ಶರಣ ಸಂಸ್ಕೃತಿ ಉತ್ಸವದ ಉದ್ಘಾಟನೆಯನ್ನು ರಾಜ್ಯಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಅವರು ನೆರವೇರಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸಂಗಪ್ಪ ಸವದಿ ಮತ್ತು ಸಾರಿಗೆ ಸಚಿವರು ಕ್ಯಾಲೆಂಡರ್ ಬಿಡುಗಡೆ  ಮಾಡಲಿದ್ದಾರೆ. ಸಾನಿಧ್ಯವನ್ನು ಶಿವಮೂರ್ತಿ ಮುರುಘಾ ಶರಣರು  ಜಗದ್ಗುರು ಮುರುಘರಾಜೇಂದ್ರ ಬೃಹನಮಠ ಚಿತ್ರದುರ್ಗ ಇವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ, ಶಾಸಕ ರಾಜಕುಮಾರ ಪಾಟೀಲ್ ಶಾಸಕರು ಸೇಡಂ, ಅರವಿಂದ ಬೆಲ್ಲದ ಶಾಸಕರು ಧಾರವಾಡ,  ಸ್ಥಳೀಯ ಶಾಸಕ  ಮಹೇಶ ಕುಮಟಳ್ಳಿ ಹಾಗೂ ಮಹಾಂತೇಶ ಕೌಜಲಗಿ ಬೈಲಹೊಂಗಲ ಶಾಸಕರು ಖ್ಯಾತ ಸಾಹಿತಿ ಕೊಟ್ಟೂರಿನ ಕುಂ ವೀರಭದ್ರಪ್ಪ, ಮಹಾಲಿಂಗಪುರದ ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ, ಚಿಕ್ಕೋಡಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ, ಜಿಲ್ಲಾಧಿಕಾರಿ ಎಸ್ ಬಿ ಬೋಮ್ಮನಹಳ್ಳಿ, ಖ್ಯಾತ ಉದ್ಯಮಿ ಧರೆಪ್ಪ ಠಕ್ಕಣ್ಣವರ, ಬಣಜವಾಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ್ ಬಣಜವಾಡ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos