`ಸನ್ನಿ ಲಿಯೋನ್ ಯುವಕ ಮಂಡಳಿ’ ರಾಯಚೂರು..!

`ಸನ್ನಿ ಲಿಯೋನ್ ಯುವಕ ಮಂಡಳಿ’ ರಾಯಚೂರು..!

ರಾಯಚೂರು,  ಜ. 16: ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಗೂ ರಾಯಾಚೂರಿನ ಹುಡುಗರಿಗೆ ಏನು ಸಂಬಂಧನೋ ಗೊತ್ತಿಲ್ಲ ಆದ್ರೆ ಇಲ್ಲೊಂದು ಯುವಕರ ಮಂಡಳಿ `ಸನ್ನಿ ಲಿಯೋನ್ ಯುವಕ ಮಂಡಳಿ’ ರಚನೆ ಮಾಡುವ ಮೂಲಕ ಹಲವರ ಹುಬ್ಬೇರಿಸುವಂತೆ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದ ಯುವಕರು ಈ ಕೆಲಸಕ್ಕೆ ಕೈ ಹಾಕಿದ್ದಾರೆ.

ಇತ್ತೀಚೆಗೆ ಇಲ್ಲಿ ನಡೆದ ಅಂಬಾಮಠದ ಅಂಬಾದೇವಿ ಜಾತ್ರೆಯಲ್ಲಿ ಈ ಸನ್ನಿ ಲಿಯೋನ್ ಅಭಿಮಾನಿ ಸಂಘದ ಬ್ಯಾನರ್ ಎಲ್ಲರನ್ನೂ ಸೆಳೆದಿದೆ. ಎಲ್ಲಿಯ ಸನ್ನಿ ಲಿಯೋನ್, ಎಲ್ಲಿಯ ಸಿಂಧನೂರು ಎಂದು ಎಲ್ಲರೂ ಉದ್ಘರಿಸುವಂತಾಗಿದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಸ್ಯಾಂಡಲ್‌ವುಡ್ ನಟರ ಅಭಿಮಾನಿ ಸಂಘಗಳು ಹೆಚ್ಚಾಗಿ ಇವೆ. ಆದರೆ ಬಾಲಿವುಡ್ ನಟಿಯ ಹೆಸರಿನಲ್ಲಿ ಸಂಘವೊಂದನ್ನು ಸ್ಥಾಪಿಸಿರುವ ಈ ಯುವಕರು ಅಚ್ಚರಿ ಮೂಡಿಸಿದ್ದಾರೆ. ಎರಡು ತಿಂಗಳ ಹಿಂದೆಯೇ 15 ಜನ ಸದಸ್ಯರನ್ನೊಳಗೊಂಡ ಈ ಸಂಘ ರಚನೆಯಾಗಿದೆ. ಈ ಬ್ಯಾನರ್ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸನ್ನಿ ಲಿಯೋನ್ ಹೆಸರಿನ ಸಂಘವೆಂದ ಕೂಡಲೇ ಬಹುತೇಕರು ಕುತೂಹಲಿಗಳಾಗಿದ್ದಾರೆ. ಆದರೆ ಈ ಯುವಕರು ನಟಿಯ ಸಾಮಾಜಿಕ ಕಾಳಜಿ ಮನಗಂಡು ಈ ರೀತಿಯ ಸಂಘ ರಚನೆ ಮಾಡಿದ್ದಾರಂತೆ. ‘ಪ್ರಕೃತಿ ವಿಕೋಪ, ಬಡ ಮಕ್ಕಳಿಗೆ, ಅನಾಥಾಶ್ರಮಗಳಿಗೆ ದೇಣಿಗೆ ನೀಡುವ ಮೂಲಕ ಸನ್ನಿ ಲಿಯೋನ್ ಔದಾರ್ಯ ಮೆರೆದಿದ್ದಾರೆ. ನಟನೆಯ ನಡುವೆಯೂ ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಿದೆ. ಅವರ ನಟನೆಗಿಂತ ಹೃದಯ ವೈಶಾಲ್ಯ ಮುಖ್ಯವಾಗಿದೆ. ಹೀಗಾಗಿ ಅವರ ಹೆಸರಿನಲ್ಲಿಯೇ ಯುವಕ ಮಂಡಳಿ ಮಾಡಿದ್ದೇವೆ’ ಎನ್ನುತ್ತಾರೆ ಸಂಘದ ಅಧ್ಯಕ್ಷ ಗೋಪಾಲ. ಮನೆ ನಿರ್ಮಾಣ ಕಾರ್ಯ ಮಾಡುವ ಇವರು, ಮುಂದಿನ ದಿನಗಳಲ್ಲಿ ಸಂಘದ ಮುಖಾಂತರ ತಾವು ಸಹ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos