ಸ್ಯಾಂಡ್‌ಲ್‌ವುಡ್‌ನಲ್ಲಿ ಮತ್ತೆ ಸನ್ನಿ ಲಿಯೋನ್ ಹೆಜ್ಜೆ

  • In Cinema
  • July 9, 2021
  • 120 Views
ಸ್ಯಾಂಡ್‌ಲ್‌ವುಡ್‌ನಲ್ಲಿ ಮತ್ತೆ ಸನ್ನಿ ಲಿಯೋನ್ ಹೆಜ್ಜೆ

ಮಾದಕ ತಾರೆ ಸನ್ನಿ ಲಿಯೋನ್ ಹೆಸರು ಕೇಳಿದೊಡನೆ ಪಡ್ಡೆ ಹುಡುಗರ ನಿದ್ದೆ ಹಾಳಾಗುತ್ತದೆ. ಸನ್ನಿ ಲಿಯೋನ್ ಸ್ಯಾಂಡಲ್‌ವುಡ್‌ಗೆ ಹೊಸಬರೇನಲ್ಲ. ಈ ಹಿಂದೆಯೇ ಎರಡು ಸಿನಿಮಾಗಳಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.

ಡಿಕೆ ಸಿನಿಮಾದಲ್ಲಿ ಸೇಸಮ್ಮ ಅಂತ ಸೊಂಟ ಬಳುಕಿಸಿರುವ ಸನ್ನಿ ಲಿಯೋನ್ ಲವ್ ಯೂ ಆಲಿಯಾ ಸಿನಿಮಾದಲ್ಲೂ ಹಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಪಡ್ಡೆ ಹುಡುಗರ ಕನಸಿನ ರಾಣಿ ಸನ್ನಿ ಲಿಯೋನ್ ಈಗ ಮತ್ತೆ ಸ್ಯಾಂಡಲ್‌ವುಡ್ ಬಾಗಿಲು ತಟ್ಟಿದ್ದಾರೆ.

ಸ್ಪೆಷಲ್ ಹಾಡೊಂದರಲ್ಲಿ ಹೆಜ್ಜೆ ಹಾಕಲು ಮತ್ತೆ ಬಂದಿದ್ದಾರೆ. ಕನ್ನಡದ ಹೊಸ ಸಿನಿಮಾದ ಐಟಂ ಹಾಡಿನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿಗಾಗಿ ಸನ್ನಿ ಲಿಯೋನ್ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ.

ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರೆ. ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ಕನ್ನಡ ಹಾಗೂ ತೆಲುಗು ಚಿತ್ರದ ಐಟಂ ಹಾಡಿಗೆ ಸನ್ನಿ ಲಿಯೋನ್ ಸೊಂಟ ಬಳುಕಿಸಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಹಾಗೂ ಬೋಲ್ಡ್ ಫೋಟೋಶೂಟ್‌ಗಳಿಂದ ಸದ್ದು ಮಾಡುವ ಸನ್ನಿ ಲಿಯೋನ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದು, ಅದು ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos