ಸುಮಲತಾರನ್ನು ಪ್ರಪೋಸ್ ಮಾಡಿದ ಆ ಬಾಲಕ ಯಾರು?

ಸುಮಲತಾರನ್ನು ಪ್ರಪೋಸ್ ಮಾಡಿದ ಆ ಬಾಲಕ ಯಾರು?

ಬೆಂಗಳೂರು, ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್ :  ನಟ ಪುನಿತ್ ರಾಜುಕುಮಾರ್ ಪುಟ್ಟ ಬಾಲಕನಾಗಿದ್ದಾಗ ಫಸ್ಟ್ ಪ್ರಪೋಸ್ ಮಾಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದಾರೆ.

ಸುಮಲತಾ ಮೊದಲ ಸಿನಿಮಾ ‘ರವಿಚಂದ್ರನ್’ ಮಾಡುವಾಗ ಅವರು 16 ವರ್ಷದ ಟೀನೆಜ್ ಹುಡುಗಿ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ 6 ವರ್ಷ.  30 ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ಬಹುಭಾಷ ನಟಿ ಸುಮಲತಾ ಸಿನಿ ಜರ್ನಿ ಶುರು ಮಾಡಿದಾಗ ಈ ನಟ ಪುಟ್ಟ ಬಾಲಕನಾಗಿದ್ದಾಗ ಫಸ್ಟ್ ಪ್ರಪೋಸ್ ಮಾಡಿದ್ದರಂತೆ.  ಶೂಟಿಂಗ್‌ ನಂತರ ಪುನೀತ್ ಮನೆಗೆ ಹೋಗಿ ‘ನಾನು ಮದುವೆ ಆಗುವುದಾದರೆ ಅದು ಸುಮಲತಾರನ್ನೇ ಎಂದು ನಿರ್ಧರಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.  ‘ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ ನಾನು’ ಎಂಬ ಹಾಡನ್ನು ಕೇಳಿ ಪ್ರಪೋಸ್ ಮಾಡಿದ್ದು ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತಾ ನೆನಪಿಸಿಕೊಂಡಿದ್ದಾರೆ. ಅಂಬರೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮಲತಾ ಈ ವಿಚಾರವನ್ನು ಅಂಬಿಯೊಂದಿಗೆ ಹಂಚಿಕೊಂಡಿದ್ದರಂತೆ. ಅಂದಿನಿಂದ ಪುನೀತ್ ಅಂಬಿಯನ್ನು ಮೀಟ್ ಮಾಡಿದಾಗಲೆಲ್ಲಾ ‘ನನ್ನ ಮಗನೇ ನೀನು ಅವಾಗಲೇ ನನ್ನ ಹೆಂಡತಿನಾ ಮದುವೆ ಆಗ್ತೀನಿ ಅಂತ ಹೇಳಿದ್ಯಾ’ ಎಂದು ರೇಗಿಸುತ್ತಿದ್ದರಂತೆ.

 

ಫ್ರೆಶ್ ನ್ಯೂಸ್

Latest Posts

Featured Videos