ಸುಲ್ತಾನ ಕಾಬೂಸ್ ನಿಧನ

ಸುಲ್ತಾನ ಕಾಬೂಸ್ ನಿಧನ

ಮಸ್ಕಟ್, ಜ. 11 : ಕರಳು ಕ್ಯಾನ್ಸರ್ನಿಂದ ಓಮನ್ ಸುಲ್ತಾನ ಕಾಬೂಸ್(79) ಶುಕ್ರವಾರ ನಿಧನರಾದರು. ಸುಲ್ತಾನ್ಕಾಬೂಸ್ ಬಿನ್ ಸೈದ್ ಅವರ ನಿಧನರಾದರೆಂದು ತಿಳಿಸಲು ತುಂಬಾ ದುಃಖವಾಗುತ್ತದೆ ಎಂದು ರಾಯಲ್ ಕೋರ್ಟ್ (ಅರಮನೆ ಆಸ್ಥಾನ) ತಿಳಿಸಿದೆ. 1970ರಲ್ಲಿ ಅರಮನೆಯಲ್ಲಿ ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ತಂದೆಯನ್ನು ಪದಚ್ಯುತಗೊಳಿಸಿ ಕಾಬೂಸ್ ಅರಸೊತ್ತಿಗೆಯ ಗದ್ದುಗೇರಿದ್ದರು.
ಆಗಿನಿಂದ ಅವರು ಬಹುತೇಕ ಐದು ದಶಕಗಳ ಕಾಲ ಓಮನ್ ಸುಲ್ತಾನರಾಗಿ ಅಧಿಕಾರದಲ್ಲಿ ಮುಂದುವರೆದಿದ್ದರು.ಸುಲ್ತಾನ್ ಅವರಿಗೆ ಯಾರೂ ಉತ್ತರಾಧಿಕಾರಿಗಳು ಇಲ್ಲ. ಅವಿವಾಹಿತರಾಗಿದ್ದ ಅವರಿಗೆ ಮಕ್ಕಳಾಗಲಿ ಅಥವಾ ಸಹೋದರಾಗಲಿ ಇಲ್ಲ. ಕಾಬೂಸ್ ಅವರ ಮುಂದಿನ ಉತ್ತರಾಧಿಕಾರಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ದೊರೆಯನ್ನು ಆಯ್ಕೆ ಮಾಡುವಲ್ಲಿ ವಿಭಿನ್ನ ವಿಧಾನ ಅನುಸರಿಸುವ ಓಮನ್ಗೆ ಮುಂದಿನ ಸುಲ್ತಾನ ಯಾರು ಎಂಬುದು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಕಾಬೂಸ್ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಮಂತ್ರಿಗಳು ಮತ್ತು ಇತರ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos