ಕಬ್ಬು ಬೆಳೆ ಹಾನಿ

ಕಬ್ಬು ಬೆಳೆ ಹಾನಿ

ಚಿಕ್ಕೋಡಿ, ಜ.24: ಕಬ್ಬು ಬೆಳೆಯು ಕೃಷ್ಣಾ, ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನೇರೆ ಎದುರಾಗಿ ಸಹಸ್ರಾರು ಎಕರೆಯಲ್ಲಿ ವರ್ಷಾನುಗಟ್ಟಲೆ ಬೆಳೆದ ಕಬ್ಬು ಶೇ 43 ರಷ್ಟು ಹಾನಿಯಾಗಿದ್ದು, ನೆರೆಯಲ್ಲಿ ಮುಳಗಡೆಯಾದ ಕಬ್ಬನ್ನು ಕಾರಖಾನೆಗಳು ಒಯ್ಯಲು ವಿಳಂಬ ಮಾಡುತ್ತಿರುವುದರಿಂದ ಉತ್ಪಾದಕರಲ್ಲಿ ನಿರಾಶೆ ಮೂಡಿಸಿದೆ.

ಕಬ್ಬು ಕಟಾವು ಕಾರ್ಮಿಕರ ಕೋರತೆ ರೈತರ ಜೋತೆಗೆ ಸಕ್ಕರೆ ಕಾರಖಾನೆಗಳಿಗೂ ತಲೆನೂವಾಗಿ ಪರಿನಮಿಸಿದ್ದು, ನೆರೆಯಲ್ಲಿ ಹಾನಿಯಾದ ಕಬ್ಬನ್ನು ಕಡಿಯಲು ಪ್ರತಿ ಏಕರೆಗೆ 3 ರಿಂದ 4 ಸಾವಿರ ರೂ ರೈತರಿಂದ ಬೇಡುತ್ತಿದ್ದಾರೆ. ಅದಲ್ಲದೆ ಕಟಾವು ಯಂತ್ರದ ಚಾಲಕರು ಏಕರೆಗೆ 5 ಸಾವಿರ ರೂ ಕೊಡಬೇಕು ಯಾಕೆಂದೆರೆ ಡಿಜೈಲ್ ಹೆಚ್ಚು ಸುಡುತ್ತದೆ ಎಂದು ಹೇಳುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

ಚಿಕ್ಕೋಡಿ ತಾಲೂಕಿನಲ್ಲಿ ಪಂಚನದಿಗಳಾದ ಕೃಷ್ಣಾ, ದೂಧಗಂಗಾ, ಪಂಚಗಂಗಾ, ವೇದಗಂಗಾ ಮತ್ತು ಚಿಕೋತ್ರಾ ನದಿಗಳ ಕೃಪಾಕಟಾಕ್ಷವಿದ್ದರೂ ಪ್ರಸಕ್ತ ಸಾಲಿನ ಭೀಕರ ಭರಗಾಲದಿಂದ ಶೇ 22 ರಷ್ಟು ಬಳೆ ನೀರಿನ ಅಭಾವದಿಂದ ಒಣಗಿ ಹೋಗಿದ್ದವು, ಇದರ ಬೆನ್ನಲ್ಲೆ ಪ್ರವಾಹ ಬಂದು ಶೇ 42 ರಷ್ಟು ಕಬ್ಬು ನಾಶವಾಗಿದೆ. ಪ್ರಸಕ್ತ ಸಾಲಿನಲ್ಲಿ 59,491 ಹೆಕ್ಟರ ಕಬ್ಬು ಬೆಳೆದಿದ್ದರು. ಇದರಲ್ಲಿ ಬರಗಾಲದಿಂದ 13,000 ಹೆಕ್ಟರ ಮತ್ತು ಪ್ರವಾಹದಿಂದಾಗಿ 23,610 ಹೆಕ್ಟರ ಕಬ್ಬು ನಾಶವಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ನದಿ ಭಾಗದಿಂದ ಮಣ್ಣು ಕಬ್ಬಿನ ಎಲೆ ಭಾಗದ ಮೇಲೆ ಬಿದ್ದಿದೆ, ಹೀಗಾಗಿ ಕಬ್ಬು ಹೆಚ್ಚು ನಾಶವಾಗುತ್ತದೆ ಎನ್ನುತ್ತಿದ್ದಾರೆ ಉತ್ಪಾದಕರು. ನದಿ ತೀರದ ಜಮಿನುಗಳಿಂದ ರೈತರಿಗೆ ಆರ್ಥಿಕ ಶಕ್ತಿಯಾದ ಕಬ್ಬು ನೆರೆ ಪ್ರಸಕ್ತ ಸಾಲಿನಲ್ಲಿ ಆಘಾತ ತಂದಿದೆ. ಪ್ರತಿವರ್ಷ ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರು ಸಾವಿರಾರು ರೂ ಖರ್ಚುಮಾಡಿ ಕಬ್ಬು ಬೆಳೆ ಬೆಳೆದಿದ್ದರು. ಆದರೆ ಸಂಪೂರ್ಣವಾಗಿ ನಿರಾಶೆ ಮೂಡಿಸಿದ್ದು, ಅರ್ಥಿಕವಾಗಿ ದುರ್ಬಲರಾಗಿದ್ದಾರೆ.

ಚಿಕ್ಕೋಡಿ ತಾಲೂಕಿನಲ್ಲಿ ಉತ್ಪಾದಿಸಿದ ಕಬ್ಬು ತಾಲೂಕಿನ ಚಿಕ್ಕೋಡಿ, ಬೇಡಕಿಹಾಳ, ನಿಪ್ಪಾಣಿ ಮತ್ತು ಜೈನಾಪೂರ, ರಾಯಬಾಗ ತಾಲೂಕಿನ ಯಡ್ರಾಂವ, ಅಥಣಿ ತಾಲೂಕಿನ ಶಿರಗುಪ್ಪಿ ಹಾಗೂ ಮಹಾರಾಷ್ಟ್ರದ ಗಡಿಭಾಗದ ಕಾರಖಾನೆಗಳಾದ ಟಾಕಳಿ, ಹುಪರಿ, ಇಚಲಕರಂಜಿ, ಶಿರೋಳ, ಕಾಗಲ ಮತ್ತು ಹಮಿದವಾಡ ಹೀಗೆ 12 ಕಾರಖಾನೆಗಳಿಗೆ ಕಬ್ಬು ಸಾಗಾನೆಯಾಗುತ್ತಿದೆ. ಕಾರಖಾನೆಗಳು ಕಬ್ಬು ಉತ್ಪಾದಕರಿಗೆ ಆಗುತ್ತಿರುವ ನೊವನ್ನು ಅರಿತುಕೊಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos