ಅಭಿಮಾನಿಗಳಿಗೆ ಬರ್ತಡೇ ದಿನ ಮನೆ ಹತ್ತಿರ ಬರಬೇಡಿ ಎಂದಿದ್ಯಾಕೆ ಸುದೀಪ?

ಅಭಿಮಾನಿಗಳಿಗೆ ಬರ್ತಡೇ ದಿನ ಮನೆ ಹತ್ತಿರ ಬರಬೇಡಿ ಎಂದಿದ್ಯಾಕೆ ಸುದೀಪ?

ಬೆಂಗಳೂರು: ಸೆಲೆಬ್ರಿಟಿಗಳ ಬರ್ತಡೇ ಬಂತಂದರೆ ಸಾಕು ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅದರಂತೆ ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರದು ಸೆಪ್ಟೆಂಬರ್ 02 ರಂದು ಜನ್ಮದಿನವಾಗಿದ್ದು ಅಭಿಮಾನಿಗಳು ಕಿಚ್ಚನ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಲು ಕಾಯುತ್ತಿದ್ದಾರೆ.

ಇನ್ನು ನಟ ಸುದೀಪ ಅವರೇ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿ ಆಚರಿಸಿಕೊಳ್ಳುತ್ತಿಲ್ಲ ಹಾಗಾಗಿ ಫ್ಯಾನ್ಸ್ ಗಳಿಗೆ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿದ್ದಾರೆ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಬರ್ತ್​ಡೇ ಸಂದರ್ಭದಲ್ಲಿ ಸಾಕಷ್ಟು ಗೊಂದಲ ಆಯ್ತು. ಅಕ್ಕ-ಪಕ್ಕದ ಮನೆಯವರು ರಿಕ್ವೆಸ್ಟ್ ಮಾಡಿದ್ದರು. ಮನೆಯ ಬಳಿ ಆಚರಣೆ ಬೇಡ. ಜಯನಗರದಲ್ಲಿರುವ ಟೆಲಿಫೋನ್​ ಎಕ್ಸ್​ಚೇಂಜ್ ಎದುರು MES ಗ್ರೌಂಡ್ ಇದೆ. ಬೆಳಿಗ್ಗೆ 10 ಗಂಟೆಯಿಂದ 12ವರೆಗೆ ಇರುತ್ತೇನೆ. ಬರುವ ಸ್ನೇಹಿತರು ಅಲ್ಲಿ ಭೇಟಿ ಮಾಡುತ್ತೇನೆ. ಇದಾದಮೇಲೂ ಮನೆಯವರ ಬಳಿ ಬರುತ್ತಾರೆ. ಆದರೆ, ಅಲ್ಲಿ ಒಪ್ಪಿಗೆ ಇಲ್ಲ. ಎಂಇಎಸ್ ಗ್ರೌಂಡ್​ನಲ್ಲೂ ಪ್ರೋಟೋಕಾಲ್​ ಇದೆ’ ಎಂದಿದ್ದಾರೆ ಸುದೀಪ್. ಇದನ್ನೂ ಓದಿ:  ಹಳ್ಳಿ ಹುಡುಗನಾಗಿ ಡಾಲಿ

ಕಳೆದ ಬಾರಿ ಬ್ಯಾರಿಕೇಡ್ ಒಡೆದು ಫ್ಯಾನ್ಸ್ ಬಂದಿದ್ದರು. ಅನೇಕರಿಗೆ ಭೇಟಿ ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಈ ಬಾರಿ ಶಾಸಕ ಸಿಕೆ ರಾಮಮೂರ್ತಿ ಅವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ’ ಎಂದು ಕೇಳಿದ್ದಾರೆ ಸುದೀಪ್.

 

ಫ್ರೆಶ್ ನ್ಯೂಸ್

Latest Posts

Featured Videos