ಅಧಿಕಾರಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ

ಅಧಿಕಾರಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ

ಚಿಕ್ಕೋಡಿ, ಫೆ. 18: ದ್ವಿತೀಯ ವರ್ಷದ ಪರೀಕ್ಷಾ ಕೇಂದ್ರ ಬದಲಾವಣೆಯಾಗಿರುವುದನ್ನ ಖಂಡಿಸಿ ನೂರಾರು ವಿದ್ಯಾರ್ಥಿಗಳು ಮೊದಲಿನ ಪರೀಕ್ಷಾ ಕೇಂದ್ರ ಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.

ಹೌದು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜನಲ್ಲಿ ಆಡ್ಸ್ ಹಾಗೂ ಕಾಮರ್ಸ್ ವಿಭಾಗದಲ್ಲಿ  70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ತಮ್ಮ ಪಕ್ಕದ ಗ್ರಾಮವಾದ ಐನಾಪೂರ ಕೆ.ಆರ್.ಇ.ಎಸ್ ಸಂಯುಕ್ತ ಪದಬಿ ಪೂರ್ವ ಕಾಲೇಜನಲ್ಲಿ ದ್ವಿತೀಯ ವರ್ಷದ ಪರೀಕ್ಷೆಯನ್ನು ಕಳೆದ ನಾಲ್ಕೈದು ವರ್ಷಗಳಿಂದ ಪರೀಕ್ಷೆ ಬರೆಯುತ್ತಿದ್ದು, ಈಗ ಪರೀಕ್ಷಾ ಕೇಂದ್ರವನ್ನು ಉಗಾರ ಪಟ್ಟಣದ ಹರಿ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಇದರಿಂದ ಪಕ್ಕದ ಗ್ರಾಮ ಐನಾಪೂರ ದಾಟಿ ಉಗಾರ ಪಟ್ಟಣಕ್ಕೆ 16 ಕಿ.ಮೀ ಕ್ರಮಿಸಬೇಕಾಗಿದ್ದು ಇದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ‌ ಮಾಡಿದರು.

ಪರೀಕ್ಷಾ ಸೆಂಟರ ಬದಲಾವಣೆಯಾಗಿದ್ದು ನಮ್ಮಗೂ ಕೂಡಾ ಗೊತ್ತಿರಲ್ಲಿ ಪ್ರವೇಶ ಪತ್ರ ಬಂದ ಮೇಲೆ ನಮ್ಮಗೆ ಗೋತ್ತಾಗಿದ್ದು‌. ಮೋಳೆ ಗ್ರಾಮದ ಕಾಲೇಜಿಗೆ ಬರುವಂತ 75% ಪ್ರತಿಷತ ವಿದ್ಯಾರ್ಥಿಗಳು ತೋಟದ ವಸತಿ ಇರುವುದರಿಂದ ಅವರಿಗೆ ಪಕ್ಕದ ಗ್ರಾಮವಾದ ಐನಾಪೂರ ಗ್ರಾಮಕ್ಕೆ ಪರೀಕ್ಷೆಗೆ‌ ಹೋಗಲು‌ ಅನಕೂಲವಾಗುತ್ತದೆ. ಹೀಗೆ ದೂರದ ಉಗಾರ ಹರಿ ವಿದ್ಯಾಲಯಕ್ಕೆ ಪರೀಕ್ಷಾ ಕೇಂದ್ರ ನೀಡಿರುವುದರಿಂದ ವಿದ್ಯಾರ್ಥಿಗಳು 16 ಕಿ.ಮೀ ಕ್ರಮೀಸ ಬೇಕಂತಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಈ ವಿಚಾರವಾಗಿ ಸಂಭಂಧ ಪಟ್ಟ ಅಧಿಕಾರಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆ ಕುರಿತು ಮನವಿ ಸಲ್ಲಿಸಲಾಗಿದೆ ಹಾಗೂ ಸ್ಥಳೀಯಾ ಸಚಿವರಾದ ಶ್ರೀಮಂತ ‌ಪಾಟೀಲ ಅವರ ಮೂಲಕ ಪರೀಕ್ಷಾ ಕೇಂದ್ರ ಬದಲಿಸುವಂತೆ ಮನವಿ ಮಾಡಲಾಗಿದೆ. ಆದರೆ, ಅಧಿಕಾರಿಗಳು ಯಾವುದೇ ತೆರನಾದ ಪ್ರತಿಕ್ರಿಯೆ ನೀಡಿಲ್ಲ‌ ಅದಕ್ಕಾಗಿ ವಿದ್ಯಾರ್ಥಿಗಳ ಅನಕ್ಕೂಲಕ್ಕಾಗಿ‌ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿ ಕೊಡಿ ಎನ್ನುತ್ತಾರೆ ಪ್ರಾಚಾರ್ಯ ಆರ್.ಜಿ. ಸಣ್ಣಪ್ಪಗೋಳ.

 

ಫ್ರೆಶ್ ನ್ಯೂಸ್

Latest Posts

Featured Videos