ವಿಧ್ಯಾರ್ಥಿಗಳು ನಮ್ಮ ದೇಶದ ದೊಡ್ಡ ಆಸ್ತಿ

ವಿಧ್ಯಾರ್ಥಿಗಳು ನಮ್ಮ ದೇಶದ ದೊಡ್ಡ ಆಸ್ತಿ

ಕೆ.ಆರ್.ಪುರ, ಜ. 17: ವಿಧ್ಯಾರ್ಥಿಗಳು ನಮ್ಮ ದೇಶದ ದೊಡ್ಡ ಆಸ್ತಿ, ಅವರು ತಮ್ಮ ಕಿರಿಯ ವಯಸ್ಸಿನಲ್ಲಿ ಸಾರ್ವಜನಿಕ ಸೇವೆಯಲ್ಲಿ ಪಾಲ್ಗೊಂಳ್ಳುವುದರಿಂದ ಅವರಲ್ಲಿ ಮತ್ತಷ್ಟು ಸೇವಾ ಮನೋಭಾವ ಹೆಚ್ಚುವುದಲ್ಲದೆ ಸದೃಡ ಅರೋಗ್ಯ ಭಾರತ ನಿರ್ಮಾಣ ಮಾಡಲು ಸಹಕಾರಿಯಾಗಲಿದೆ ಎಂದು ಲೆಫ್ಟಿನೆಂಟ್ ಕಮಾಂಡರ್ ರವಿ ಕಿರಣ್ ಅವರು ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಸವನಪುರ ವಾರ್ಡ್‌ ನಲ್ಲಿ ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಜರುಗಿದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಮನೆ ಮನೆಗೆ ಬೇಟಿ ನೀಡಿ ಜನರಿಗೆ ಅರಿವು ಮೂಡಿಸಿದ್ದ ಬಿ.ವಿ.ಎನ್.ಹೆಚ್. ಎಸ್. ಶಾಲೆಯ ಎನ್.ಸಿ.ಸಿ ವಿಧ್ಯಾರ್ಥಿಗಳಿಗೆ ಅವರು ಅಭಿನಂದನಾ ಪತ್ರ ವಿತರಿಸಿ ನಂತರ ಮಾತನಾಡಿದರು.

ಬಿ.ವಿ.ಎನ್.ಹೆಚ್.ಎಸ್.ಶಾಲೆಯ

ಎನ್.ಸಿ.ಸಿ ವಿದ್ಯಾರ್ಥಿಗಳು, ಸ್ವರ್ಶ ಕುಷ್ಠರೋಗ, ಪೋಲಿಯೊ ಲಸಿಕೆ, ಡೆಂಗೂ, ಚಿಕನ್ ಗುನ್ಯಾ ಹಾಗೂ ಇತರೆ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಂದೋಲನ ಕಾರ್ಯಕ್ರಮಗಳಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಆಶಾ ವರ್ಕರ್ಸ್ ಜೊತೆಯಲ್ಲಿ ಕೈಜೋಡಿಸಿ ಸಮಾಜ ಸೇವೆಯಲ್ಲಿ ಬಗವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.

ಎನ್.ಸಿ.ಸಿ.ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದುರಿಂದ ಅವರಲ್ಲಿ ಮತ್ತಷ್ಟು ಸೇವಾ ಮನೋಭಾವ ಹೆಚ್ಚಾಗಿ ಬರಲಿದೆ ಎಂದು ತಿಳಿಸಿದರು.

ಇದೆ ಸಮಯದಲ್ಲಿ ಬಸವನ ಪುರ ವಾರ್ಡ್ ಆರೋಗ್ಯ ನಿರೀಕ್ಷಕರಾದ ಗುರುರಾಜ್ ಮಾತನಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸ್ವರ್ಶ ಕುಷ್ಠರೋಗ ಅರಿವು ಆಂದೋಲನದಲ್ಲಿ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ವಾರ್ಡ್ ನ ಎಲ್ಲಾ ಮನೆ ಮನೆಗೆ ತೆರಳಲು ಹೆಚ್ಚು ಸಹಕಾರಿ ಯಾಗಲಿದೆ ಎಂದರು.

ಈ ವಯಸ್ಸಿನಲ್ಲಿ ಮಾಡುವ ಸಮಾಜ ಸೇವೆಯಿಂದ ನಿಮ್ಮ ಮುಂದಿನ ದಿನಗಳಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವ ಶಕ್ತಿ ನಿಮ್ಮಲ್ಲಿ ಸೃಷ್ಟಿ ಆಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಬ್ ಲೆಫ್ಟಿನೆಂಟ್‌ ಚಂದ್ರಕಾಂತ್, ತಾಲ್ಲೂಕು ಹಿರಿಯ ಅರೋಗ್ಯ ನಿರೀಕ್ಷಕರಾದ ಬಾಬು, ರಾಜು, ನರಸಿಂಹ ಮೂರ್ತಿ ಹಾಗೂ ಎನ್.ಸಿ.ಸಿ ಅಧಿಕಾರಿ ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos