ವಿದ್ಯಾರ್ಥಿಗಳ ಸಜ್ಜಗೊಳಿಸುತ್ತಿರುವ ಗುರುಗಳು

ವಿದ್ಯಾರ್ಥಿಗಳ ಸಜ್ಜಗೊಳಿಸುತ್ತಿರುವ ಗುರುಗಳು

ಬೆಳಗಾವಿ ,ಮೇ. 13 : ನಗರ ಪಟ್ಟಣ, ಹಾಗೂ ಕೆಲ ಸುಧಾರಿತ ಹಳ್ಳಿಗಳು ಮೊಬೈಲ್‌ ನೆಟ್‌ವರ್ಕ್ ಹೊಂದಿವೆ. ಹೀಗಾಗಿ, ಇಲ್ಲೆಲ್ಲ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಆನ್‌ಲೈನ್‌ ಮೂಲಕ ಮಾರ್ಗದರ್ಶನ, ಪರೀಕ್ಷಾ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಆದರೆ, ಯಾವ ನೆಟ್‌ವರ್ಕ್ ಸಹ ಇಲ್ಲದ ರಿಮೋಟ್‌ ಪ್ರದೇಶಗಳಲ್ಲಿನ ಮಕ್ಕಳನ್ನು ಸಜ್ಜುಗೊಳಿಸಲು ಜಿಲ್ಲೆಯ ಶಿಕ್ಷಕರು ಸ್ವಂತ ಅವರಿದ್ದಲ್ಲಿಗೇ ಧಾವಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರು ಮತ್ತು ಬೆಳಗಾವಿ ತಾಲೂಕಿನಲ್ಲಿ ದಟ್ಟ ಅರಣ್ಯ ಪ್ರದೇಶಗಳಿವೆ. ಇವೆಲ್ಲ ಮೊದಲೇ ದುರ್ಗಮ ಹಾದಿಯ ಸ್ಥಳಗಳು. ಈ ಅರಣ್ಯದೊಳಗಿರುವ ಕೆಲ ಗ್ರಾಮಗಳ ಮಕ್ಕಳು ಕಷ್ಟಪಟ್ಟು ದೂರದ ಶಾಲೆಗಳಿಗೆ ಓದಲು ಬರುತ್ತಾರೆ. ಕೊರೊನಾ ಲಾಕ್‍ಡೌನ್ ಆದ ನಂತರ ಶೈಕ್ಷಣಿಕ ಚಟುವಟಿಕೆಗಳೆಲ್ಲ ವ್ಯತ್ಯಯವಾಗಿ ಪರೀಕ್ಷೆಗಳು ಮುಂದಕ್ಕೆ ಹೋದಾಗ ಅತಿ ಹೆಚ್ಚು ಆತಂಕಕ್ಕೊಳಗಾದವರೆಂದರೆ.

ಈ ಗ್ರಾಮಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು, ಈಗ ಲಾಕ್‌ಡೌನ್‌ ಸಡಿಲಿಕೆಯಾಗಿ ಸರಕಾರ ಯಾವುದೇ ಕ್ಷಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಸಾಧ್ಯತೆ ಇರುವುದರಿಂದ ತಾವಿದ್ದಲ್ಲಿಗೇ ಶಿಕ್ಷಕರು ಬರುತ್ತಿರುವುದು ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಹೊಸ ಹುರುಪು ತಂದಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos