ವಿದ್ಯಾರ್ಥಿನಿ ಸಾಧನೆ: ಪ್ರಧಾನಿ ಮೋದಿ ಜೊತೆ ಚರ್ಚೆಗೆ ಆಯ್ಕೆ..!

ವಿದ್ಯಾರ್ಥಿನಿ ಸಾಧನೆ: ಪ್ರಧಾನಿ ಮೋದಿ ಜೊತೆ ಚರ್ಚೆಗೆ ಆಯ್ಕೆ..!

ಬಾಗಲಕೋಟೆ, ಜ. 06: ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿ ಜೊತೆ ಸಂವಾದಕ್ಕೆ ವಿದ್ಯಾರ್ಥಿನಿಯೊಬ್ಬರು ಆಯ್ಕೆಯಾಗಿದ್ದಾರೆ.

ಹೌದು, ಬಾಗಲಕೋಟೆ ಜಿಲ್ಲೆಯ ಕುಗ್ರಾಮವೊಂದರ ಹಾಗೂ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಜೊತೆ ಸಂವಾದಕ್ಕೆ ಆಯ್ಕೆಯಾಗಿ ಹೆಮ್ಮೆ ತಂದಿದ್ದಾರೆ. ಪೂರ್ಣಿಮಾ, ಪ್ರಧಾನಿ ಮೋದಿ ಜೊತೆ ಸಂವಾದಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ

ಜಿಲ್ಲೆಯ ಜಂಬಲದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಪೂರ್ಣಿಮಾ ರೇವಣ ಸಿದ್ದಪ್ಪ ನಾಶಿ ಪ್ರಧಾನಿ ನರೇಂದ್ರ ಮೋದಿ ಜೊತೆ ಪರೀಕ್ಷಾ ಪೆ ಚರ್ಚಾ ಸಂವಾದಕ್ಕೆ ಆಯ್ಕೆಯಾಗಿದ್ದು, ಸಹಜವಾಗಿ ಸಂತಸಕ್ಕೆ ಕಾರಣವಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ತಾರಿವಾಳ ಗ್ರಾಮದವರಾದ ಪೂರ್ಣಿಮಾ, ಎಕ್ಸಾಮಿಂಗ್ ಎಕ್ಸಾಮ್ ಅನ್ನೋ ವಿಷಯದ ಬಗ್ಗೆ ಪ್ರಬಂಧ ಬರೆದಿದ್ದರು. ದೇಶಾದ್ಯಂತ ಇರುವ ಶಾಲೆಗಳಲ್ಲಿ ಈ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಬಾಗಲಕೋಟೆ ಜಿಲ್ಲೆಯಿಂದಲೂ ಸಾವಿರಾರು ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಈ ಪ್ರಬಂಧ ಬರೆದಿದ್ದರು. ಆದ್ರೆ, ಪ್ರಬಂಧ ಸ್ಪರ್ಧೆಯಲ್ಲಿ ಎಲ್ಲರನ್ನೂ ಮೀರಿಸಿ, ಜಿಲ್ಲೆಯಿಂದ ಪ್ರಧಾನಿ ಮೋದಿ ಜೊತೆ ಸಂವಾದಕ್ಕೆ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಅನ್ನೋ ಕೀರ್ತಿಗೆ ಪೂರ್ಣಿಮಾ ಭಾಜನರಾಗಿದ್ದಾರೆ.

ಇನ್ನು ಈ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇದೇ ತಿಂಗಳು ಅಂದರೆ ಜನವರಿ 20ರಂದು ರಾಷ್ಟ್ರರಾಜಧಾನಿಯಲ್ಲಿ ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಹಾಗೂ ಸಂವಾದದಲ್ಲಿ ಪೂರ್ಣಿಮಾ ಪಾಲ್ಗೊಳ್ಳಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos