24ರ ಯುವತಿ, 69ರ ವೃದ್ಧ ಆದರೂ ‘ಲವ್’ ಕಡಿಮೆಯಾಗಿಲ್ಲ..!

24ರ ಯುವತಿ, 69ರ ವೃದ್ಧ ಆದರೂ ‘ಲವ್’ ಕಡಿಮೆಯಾಗಿಲ್ಲ..!

ಕೊಲಂಬಿಯಾ, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಪ್ರೀತಿಗೆ ಬಿದ್ದವರು ವಯಸ್ಸು ನೋಡುವುದಿಲ್ಲ. ಇಬ್ಬರ ಮಧ್ಯೆ 45 ವರ್ಷಗಳ ಅಂತರವಿದ್ರೂ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ಜೋಡಿ ತಮ್ಮ ಸುಖ ದಾಂಪತ್ಯದ ಗುಟ್ಟೇನು ಎಂಬುದನ್ನು ಹೇಳಿದ್ದಾರೆ. ಸ್ಟೆಫನಿ ಎಡರ್ಡನ್ ಗೆ ಇನ್ನೂ 24 ವರ್ಷ. ತನಗಿಂತ 45 ವರ್ಷ ಹೆಚ್ಚು ವಯಸ್ಸಾಗಿರುವ 69 ವರ್ಷದ ಡೋನ್ ವೆಲ್ಫರ್ ಜೊತೆ ಮದುವೆಯಾಗಿದ್ದಾಳೆ. ಮದುವೆಗೂ ಮುನ್ನ ನಾಲ್ಕು ವರ್ಷಗಳ ಪ್ರೀತಿಯಲ್ಲಿದ್ದರಂತೆ. ದಾಂಪತ್ಯ ಜೀವನ ಯಶಸ್ವಿಯಾಗಲು ಪ್ರತಿ ದಿನ ಸಂಭೋಗ ಬೆಳೆಸ್ತೇವೆ ಎಂದು ಸಂದರ್ಶನವೊಂದರಲ್ಲಿ ಸ್ಟೆಫನ್ ಹೇಳಿದ್ದಾಳೆ. ಸ್ಟೆಫನಿ ಬಾರ್ ಒಂದರಲ್ಲಿ ಕೆಲಸ ಮಾಡ್ತಿದ್ದಳಂತೆ. ಅಲ್ಲಿಗೆ ನಿವೃತ್ತ ಡೋನ್ ಬರ್ತಿದ್ದ ಎನ್ನಲಾಗಿದೆ. ಡೋನ್ ಗೆ ಫಿದಾ ಆಗಿದ್ದ ಸ್ಟೆಫನಿ ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಳಂತೆ. ಆರಂಭದಲ್ಲಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಂತೆ. ಈ ಜೋಡಿಗೆ ಗಂಡು ಮಗುವಿದೆ. ನಮ್ಮ ಪ್ರೀತಿಯನ್ನು ಜನರು ಅರ್ಥ ಮಾಡಿಕೊಳ್ತಿಲ್ಲವೆಂದು ಕೊಲಂಬಿಯಾ ನಿವಾಸಿ ಸ್ಟೆಫನಿ ಹೇಳ್ತಾಳೆ.

ಫ್ರೆಶ್ ನ್ಯೂಸ್

Latest Posts

Featured Videos