ಶ್ರೀರಂಗಪಟ್ಟಣ  ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಹಾಗು ಧಾರ್ಮಿಕ

ಶ್ರೀರಂಗಪಟ್ಟಣ  ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಹಾಗು ಧಾರ್ಮಿಕ

 ಮೈಸೂರು, ಸೆ. 17: ನಗರದಿಂದ 13 ಕಿ.ಮೀ., ಮಂಡ್ಯ ನಗರದಿಂದ 25 ಕಿ ಮೀ ದೂರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಗಡಿಯಲ್ಲಿದೆ. ಪಟ್ಟಣವು ಸುತ್ತಲೂ ಕಾವೇರಿ ನದಿಯಿಂದ ಆವೃತವಾಗಿದೆ. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯು ಪೂರ್ವವಾಹಿನಿ ಹಾಗು ಪಶ್ಚಿಮವಾಹಿನಿಗಳಾಗಿ ಕವಲೊಡೆದು ಹರಿಯುತ್ತದೆ. ಇದರಿಂದಾಗಿ ಶ್ರೀರಂಗಪಟ್ಟನವು ಒಂದು ದ್ವೀಪದಂತಿದೆ.

ಧಾರ್ಮಿಕ ಮಹತ್ವ: ಶ್ರೀರಂಗನಾಥ ಸ್ವಾಮಿ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ದೇವಾಲಯವು ಗಂಗ ಅರಸರು ಕಾಲದ್ದೆಂದು ಪ್ರತೀತಿಯಿದೆ. ಇದನ್ನು 12 ನೇ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಕಾವೇರಿ ನದಿ ಕವಲೊಡೆಯುವ ಸ್ಥಳಗಳಲ್ಲೆಲ್ಲ ಶ್ರೀರಂಗನಾಥ ಸ್ವಾಮಿಯ ದೇವಾಲಯಗಳಿರುವುದು ಒಂದು ವಿಶೇಷ. ಇವುಗಳೆಂದರೆ

ಹಿಂದುಗಳಿಗೆ ಅಂತಿಮ ಕರ್ಮಗಳನ್ನು ಮಾಡಲು ಒಂದು ಪುಣ್ಯ ಕ್ಷೇತ್ರ. ಇಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೃತರ ಅಸ್ಥಿಗಳನ್ನು ವಿಸರ್ಜಿಸಿದರೆ ಮೋಕ್ಷ ಲಭಿಸುವುದೆಂದು ನಂಬಿಕೆಯಿದೆ.

ಐತಿಹಾಸಿಕ ಮಹತ್ವ: ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಶ್ರೀರಂಗಪಟ್ಟಣ ಐತಿಹಾಸಿಕ ಮಹತ್ವವುಳ್ಳ ಊರಾಗಿದೆ. ಟಿಪ್ಪು ಸುಲ್ತಾನ ಹಾಗು ಹೈದರಾಲಿ ಯವರ ಕಾಲದಲ್ಲಿ ಶ್ರೀರಂಗಪಟ್ಟಣ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಪ್ರಾಮುಖ್ಯತೆ: ಶ್ರೀರಂಗಪಟ್ಟಣ ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. 9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ದೇವಾಲಯ ಹೊಯ್ಸಳ ಮತ್ತು ವಿಜಯನಗರ ಶೈಲಿಯ ಸಂಯುಕ್ತ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ನಿಂತಿದೆ.

ವಾಸ್ತು ಶಿಲ್ಪ ಇಂಡೋ –ಮುಸ್ಲಿಂ ಪರಂಪರೆಗೆ ಸೇರಿದೆ. ಇದರ ಪ್ರಭಾವವನ್ನು ಇಲ್ಲಿನ ಸ್ಮಾರಕಗಳಾದ ದರಿಯಾ ದೌಲತ್ ಬಾಗ್ ಮತ್ತು ಜಾಮ ಮಸೀದಿಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ಶ್ರೀರಂಗಪಟ್ಟಣವು ಬೆರಗುಗೊಳಿಸುವ ಸುಂದರ ತಾಣಗಳನ್ನು ಹೊಂದಿದೆ. ಭಾರತದ ಎರಡನೆ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟಿರುವ ಶಿವನಸಮುದ್ರ ಜಲಪಾತದಂತಹ ಪ್ರಸಿದ್ಧ ವಿಹಾರ ತಾಣಗಳು ಇಲ್ಲಿವೆ. ಶ್ರೀರಂಗಪಟ್ಟಣದ ಸಂಗಮ – ಇಲ್ಲಿ ಕಾವೇರಿ, ಕಬಿನಿ ಮತ್ತು ಹೇಮಾವತಿ ನದಿಗಳು ಕೂಡುವ ಸಂಗಮವಿದ್ದು, ನೋಡಲು ಯೋಗ್ಯವಾದ ಸ್ಥಳವಾಗಿದೆ. 300 ವರ್ಷಗಳ ಹಿಂದಿನ, ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಾಗಾರ ಸ್ಮಾರಕವನ್ನು ಮೂಲ ಸ್ಥಳದಿಂದ 130 ಮೀಟರ್ ದೂರದ ಮತ್ತೊಂದು ಸ್ಥಳಕ್ಕೆ ಲವಲೇಶವೂ ಮುಕ್ಕಾಗದಂತೆ ಅಮೆರಿಕದ ವುಲ್ಫೆ ಮತ್ತು ನಮ್ಮದೇ ದೇಶದ ಪಿಎಸ್ಎಲ್ ಕಂಪೆನಿಗಳು, ಸ್ಥಳಾಂತರಿಸಿವೆ.

ನೆಲಮಟ್ಟದಿಂದ 20 ಅಡಿ ಆಳದಲ್ಲಿ ಕಾಲುವೆ ತೋಡಿ. ಅದರ ಮೇಲೆ ಬಲಶಾಲಿಯಾದ ಉಕ್ಕಿನ ತೊಲೆಗಳನ್ನು ಅಳವಡಿಸಿ, ವಿವಿಧ ಗಾತ್ರದ ಮತ್ತು ಉದ್ದದ ಬೀಮ್ಗಳ ಮೇಲೆ ಸ್ಮಾರಕವನ್ನು ಕೂರಿಸಿ ವಿದೇಶದ ‘ಯುನಿಫೈಡ್ ಜಾಕಿಂಗ್ ಸಿಸ್ಟಂ’ಎಂಬ ವಿಶೇಷ ತಂತ್ರಜ್ಞಾನದ ಸಹಾಯದಿಂದ ಈ ಸ್ಮಾರಕವನ್ನು ನಿಗದಿತ ಸ್ಥಳಕ್ಕೆ ಮುನ್ನೂಕಲು ಯಶಸ್ವಿಯಾಗಿರುವ ರೈಲ್ವೆ ಇಲಾಖೆ ಗೆಲುವಿನ ನಗೆ ಬೀರಿದೆ.

ಸ್ಮಾರಕವನ್ನು 3 ವಲಯವಾಗಿ ವಿಭಾಗಿಸಿ ಅದರ ಕೆಳಭಾಗವನ್ನು ಭೂಮಿಯಿಂದ ಬೇರ್ಪಡಿಸಿ ‘ಕ್ಯಾರಿ ಲೈನ್’ (ನೆಲದಿಂದ ಎರಡು ಅಡಿ ಎತ್ತರದ ರೇಖೆಗೆ)ಗೆ ತರಲಾಯಿತು. ಸ್ಮಾರಕದ ಕೆಳಗೆ

೫ ಮುಖ್ಯ ಕಬ್ಬಿಣ ತೊಲೆಗಳು, 11 ಕ್ರಾಸ್ ಬೀಮ್ಗಳು ಮತ್ತು 31 ನೀಡಲ್ ಬೀಮ್ಗಳನ್ನು ಅಳವಡಿಸಲಾಗಿತ್ತು.

ಅವುಗಳಿಗೆ ಒಟ್ಟು 37 ಜಾಕ್ಗಳನ್ನು ಸೇರಿಸಿ ಮುನ್ನೂಕುವ ಪ್ರಕ್ರಿಯೆ ಆರಂಭಿಸಲಾಯಿತು. ಇಡೀ ಕಟ್ಟಡ ಒಮ್ಮೆಗೇ ಮುನ್ನಡೆಯುವಂತೆ ಮಾಡಲು ‘ಯೂನಿಫೈಡ್ ಜಾಕಿಂಗ್ ಸಿಸ್ಟಂ (ಯುಜೆಎಸ್)’ ಎಂಬ ವಿನೂತನ ತಂತ್ರಜ್ಞಾನವನ್ನು ಬಳಕೆ ಮಾಡಲಾಯಿತು. ಸಾಮಾನ್ಯ ಯಂತ್ರದಂತೆ ಕಾಣುವ ಯುಜೆಎಸ್ ಯಂತ್ರ ಇಲ್ಲಿ ಮುಖ್ಯ ಚಾಲಕಶಕ್ತಿಯಾಗಿ ಕೆಲಸ ಮಾಡಿದ್ದು ಗಮನಾರ್ಹ ಸಂಗತಿ.

ಶಸ್ತ್ರಾಗಾರದ ರಚನೆ: ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್ ಕಾಲದ ೮ ಶಸ್ತ್ರಾಗಾರಗಳ ಪೈಕಿ ಜೋಡಿ ರೈಲು ಮಾರ್ಗ ನಿರ್ಮಾಣ ಉದ್ದೇಶಕ್ಕೆ ಸ್ಥಳಾಂತರಗೊಂಡಿರುವ ಶಸ್ತ್ರಾಗಾರ ಷಡ್ಕೋನಾಕೃತಿಯ ಸ್ಮಾರಕ. ಈ ದ್ವೀಪ ಪಟ್ಟಣದ ೩ ಸುತ್ತಿನ ಕೋಟೆಯ ಸುತ್ತ ಕಾವಲು ಕಾಯುವ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸಲು ಇವುಗಳನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದ್ದ.

ಚುರಕಿ ಗಾರೆಯಿಂದ (ಸುಣ್ಣ, ಸುಟ್ಟ ಇಟ್ಟಿಗೆ, ಮರವಜ್ರ ಮಿಶ್ರಣ) ಬಳಸಿ ಇದನ್ನು ನಿರ್ಮಿಸಲಾಗಿದೆ. ಸ್ಮಾರಕ ಗೋಡೆ ಒಂದು ಮೀಟರ್ ದಪ್ಪ ಇದೆ. ಮೇಲ್ಭಾಗದಲ್ಲಿ ಬೆಳಕಿಂಡಿ ಇಡಲಾಗಿದೆ.

ನೆಲಮಟ್ಟದಿಂದ ಕೆಳಗೆ ಸುಮಾರು ೧೦ ಅಡಿ ಆಳದಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಲು ವ್ಯವಸ್ಥೆ ರೂಪಿಸಲಾಗಿದೆ. ೨೦೦ ವರ್ಷಗಳ ಹಿಂದೆಯೇ ಜ್ಯಾಮಿತಿಯ ತತ್ವದ ಆಧಾರದ ಮೇಲೆ ಇಳಿಜಾರು ಚಾವಣಿ ಮಾದರಿಯಲ್ಲಿ ಈ ಶಸ್ತ್ರಾಗಾರ ನಿರ್ಮಿಸಿರುವುದು ವಿಶೇಷ.

ನೋಡುವ ಸ್ಥಳಗಳು: ಗುಂಬಜ್ ಕೃಷ್ಣ ರಾಜ ಸಾಗರ ಬಲಮುರಿ ಎಡಮುರಿ ಸಂಗಮ್ ಗೋಸಾಯ್ ಘಾಟ್ ಧ್ವನಿ ಬೆಳಕು ಕಾರ್ಯಕ್ರಮ ಸ್ನಾನ ಘಟ್ಟ ಚಾಮರಾಜೇಂದ್ರ ವಸ್ತು ಸಂಗ್ರಹಾಲಯ ಕಾವೇರಿನದಿ ಮಹದೇವಪುರ

 

 

 

ಫ್ರೆಶ್ ನ್ಯೂಸ್

Latest Posts

Featured Videos