ಶ್ರೀಮಂತ ಕ್ರೀಡಾಪಟುಗಳಲ್ಲಿ ಕೊಹ್ಲಿ

ಶ್ರೀಮಂತ ಕ್ರೀಡಾಪಟುಗಳಲ್ಲಿ ಕೊಹ್ಲಿ

ನವದೆಹಲಿ, ಜೂನ್. 13: ಕ್ರಿಕೆಟ್‌ ಜಗತ್ತಿನ ಪೋಸ್ಟರ್‌ ಬಾಯ್‌ ವಿರಾಟ್‌ ಕೊಹ್ಲಿ ವಿಶ್ವದ ಅಗ್ರ 100 ಶ್ರೀಮಂತ ಕ್ರೀಡಾಪಟುಗಳ ಸಾಲಿನಲ್ಲಿ ಸತತ 2ನೇ ವರ್ಷ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆ 2019ರ ಸಾಲಿನ ಶ್ರೀಮಂತ ಕ್ರೀಡಾಪಟುಗಳ ಪಟ್ಟಿ ಪ್ರಕಟಗೊಳಿಸಿದ್ದು, ಕೊಹ್ಲಿ 100ನೇ ಸ್ಥಾನದಲ್ಲಿದ್ದಾರೆ. ಅಗ್ರ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ, ಕ್ರಿಕೆಟಿಗ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಕಳೆದ ವರ್ಷದಲ್ಲಿ ವಿರಾಟ್‌ ಒಟ್ಟು 25 ಮಿಲಿಯನ್‌ ಡಾಲರ್‌ (ಅಂದಾಜು .173.3 ಕೋಟಿ) ಸಂಪಾದನೆ ಮಾಡಿದ್ದಾರೆ. ಇದರಲ್ಲಿ .145.5 ಕೋಟಿ ಜಾಹೀರಾತು ಒಪ್ಪಂದ, ಪ್ರಾಯೋಜಕತ್ವದಿಂದ ಬಂದರೆ, ಇನ್ನುಳಿದ .27.72 ಕೋಟಿ ಸಂಭಾವನೆ ರೂಪದಲ್ಲಿ ದೊರೆತಿದೆ.

2018ರ ಪಟ್ಟಿಯಲ್ಲಿ ಕೊಹ್ಲಿ 83ನೇ ಸ್ಥಾನದಲ್ಲಿದ್ದರು. ಈ ವರ್ಷ ಜಾಹೀರಾತು ಒಪ್ಪಂದ, ಪ್ರಾಯೋಜಕತ್ವದ ಮೂಲಕ ಸುಮಾರು .7 ಕೋಟಿ ಅಧಿಕ ಸಂಪಾದಿಸಿದರೂ, 17 ಸ್ಥಾನಗಳ ಇಳಿಕೆ ಕಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos