ಬೆಂಗಳೂರು: ಶ್ರೀಲೀಲಾ ಅವರು ಕನ್ನಡ ಚಿತ್ರರಂಗಕ್ಕೆ ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದ್ದರು. ಈಗ ಅವರು ಬೇಡಿಕೆಯ ನಟಿರಾಗಿದ್ದಾರೆ.
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ದೊಡ್ಡ ದೊಡ್ಡ ಸಿನಿಮಾ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಸಿಕ್ಕ ಪ್ರತಿ ಸಿನಿಮಾ ಅವಕಾಶದಲ್ಲಿಯೂ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸುತ್ತಾ ತೆಲುಗು ಪ್ರೇಕ್ಷಕರ ಮೆಚ್ಚಿನ ನಟಿಯಾಗಿಬಿಟ್ಟಿದ್ದಾರೆ. ಸಿನಿಮಾ ಅವಕಾಶಗಳು ಹೆಚ್ಚಾಗುತ್ತಿದ್ದಂತೆ ನಟಿ ಶ್ರೀಲೀಲಾ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎಂಬ ಮಾತುಗಳು ಟಾಲಿವುಡ್ನಲ್ಲಿ ಆರಂಭವಾಗಿದೆ.
ಶ್ರೀಲೀಲಾ ತಮ್ಮ ಸಂಭಾವನೆಯನ್ನು ಮೂರು ಕೋಟಿಗೆ ಏರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ವೃತ್ತಿ ಆರಂಭಿಸಿದಾಗ ಕನ್ನಡದ ಸಿನಿಮಾಗಳಲ್ಲಿ ಲಕ್ಷಗಳಲ್ಲಿ ಸಂಭಾವನೆ ಪಡೆಯುತ್ತಿದ್ದ ಶ್ರೀಲೀಲಾ, ತೆಲುಗಿಗೆ ಎಂಟ್ರಿ ಆದಾಗಲೂ ಲಕ್ಷಗಳಲ್ಲಿಯೇ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ಇತ್ತೀಚೆಗೆ ಶ್ರೀಲೀಲಾಗೆ ಬೇಡಿಕೆ ಹೆಚ್ಚಾಗಿದ್ದು, ಸಹಜವಾಗಿಯೇ ಬೇಡಿಕೆ ಹೆಚ್ಚಾದಂತೆ ಸಂಭಾವನೆಯನ್ನೂ ಹೆಚ್ಚು ಮಾಡಿಕೊಂಡಿದ್ದಾರೆ. ಶ್ರೀಲೀಲಾ ಈಗ ಪ್ರತಿ ಸಿನಿಮಾಕ್ಕೆ ಎರಡು ಅಥವಾ ಮೂರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.