ಕ್ರೀಡೆ ‘ಟೈಮ್ ಪಾಸ್’ ಅಲ್ಲ; ಆತ್ಮವಿಶ್ವಾಸ

ಕ್ರೀಡೆ ‘ಟೈಮ್ ಪಾಸ್’ ಅಲ್ಲ; ಆತ್ಮವಿಶ್ವಾಸ

ನವದೆಹಲಿ : ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಕ್ರೀಡೆಗಳನ್ನು ಪರಿಚಯಿಸಲು, ಜಮ್ಮು- ಕಾಶ್ಮೀರವನ್ನು ಕ್ರೀಡಾ ಕೇಂದ್ರವನ್ನಾಗಿ ಮಾಡಲು ಖೇಲೋ ಇಂಡಿಯಾ ಗೇಮ್ಸ್ ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಎಂ ಮೋದಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕ್ರೀಡೆ ಕೇವಲ ‘ಟೈಮ್ ಪಾಸ್’ ಅಲ್ಲ. ಕ್ರೀಡೆಗಳಲ್ಲಿ ನಾವು ತಂಡದ ಉತ್ಸಾಹವನ್ನು ಕಾಣುತ್ತೇವೆ, ಸೋಲಿನಿಂದ ಕಲಿಯುತ್ತೇವೆ. ಮತ್ತೆ ಮತ್ತೆ ವಿಜಯಶಾಲಿಗಳಾಗಲು ಪ್ರಯತ್ನಿಸುತ್ತೇವೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

ಇಂದಿನಿಂದ ಮಾರ್ಚ್ 2ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 27 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos