ಆಧುನಿಕ ಯುಗದಲ್ಲಿ ಲಗೋರಿ ಆಟ!

ಆಧುನಿಕ ಯುಗದಲ್ಲಿ ಲಗೋರಿ ಆಟ!

ಕೆ.ಆರ್.ಪುರ, ಆ. 13: ಇಂದಿನ ಆಧುನಿಕ ಯುಗದಲ್ಲಿ ಯುವಕರು ಮೊಬೈಲ್ ಗೇಮ್ ಗಳ ಮೊರೆ ಹೋಗುತ್ತಿದ್ದು, ಗ್ರಾಮೀಣ ಕ್ರೀಡೆಗಳಾದ ಲಗೋರಿ ಮರಕೋತಿ, ಕೋಕೊ, ಕಬಡ್ಡಿ, ಕುಂಟೆ ಬಿಲ್ಲೆ, ಜಿಲ್ಲದಾಂಡ್, ಬುಗಿರಿ, ಗೋಲಿ, ಮಟ್ಟ, ಚೌ, ಸೇರಿದಂತೆ ಇತರೆ ಕ್ರೀಡೆಗಳು ಕಣ್ಮರೆಯಾಗುತ್ತಿವೆ.
ಇಂತಹ ಕ್ರೀಡೆಗಳಲ್ಲಿ ಒಂದಾದ ಲಗೋರಿ ಕ್ರೀಡೆಯು ಇದೀಗ ನಗರದ ಯುವಕರು ಸೇರಿ ಆಡಿ ಜನರ ಮನಸೆಳೆದವು.
ಬೆಂಗಳೂರು ನಗರದ ಹೂಡಿಯಲ್ಲಿ ಇಂದಿನ ಶಾಲ ಮಕ್ಕಳು ಗೋಲಿ, ಲಗೋರಿ, ಕಬಡ್ಡಿ ಸೇರಿದಂತೆ ಇತರೆ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರೀಡೆಗಳು ಆಡುತ್ತಿರುವುದು, ಸಂತಸದ ವಿಚಾರವೆಂದು ಸ್ಥಳೀಯ ಮುಖಂಡ ಪವಣ್ ತಿಳಿಸಿದರು.
ಹೊಟ್ಟೆಯ ಚೀಲವನ್ನು ದುಂಬಿಸಿಕೊಳ್ಳಲು ರಾಜ್ಯ ಹಾಗೂ ಇತರೆ ರಾಜ್ಯಗಳಿಂದ ಬಂದು ನಗರದಲ್ಲಿ ನೆಲಸಿರುವ ಹಳ್ಳಿ ವಾಸಿಗಳು, ಅವರ ಮಕ್ಕಳಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ  ಆಸಕ್ತಿ ಮೂಡಿಬರುತ್ತಿದ್ದು, ನಗರ ವಾಸಿಗಳು ಈ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುಸುತ್ತಿದ್ದಾರೆ.

ನಮಗೆ ಲಗೋರಿ, ಕಬಡ್ಡಿ, ಗೋಲಿ, ಗಾಳಿಪಟ ಇಂತಹ ಆಟೆಗಳಂದರೆ ತುಂಬ ಇಷ್ಟ, ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ ಆದರೆ ನನ್ನ ಸ್ನೇಹಿತರು ಹಳ್ಳಿಗಳಿಂದ ಬಂದಿರುವದರಿಂದ ಅವರು ಈ ಆಟಗಳನ್ನು ಹೇಳಿಕೊಟ್ಟಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos