ಕ್ರೀಡೆಯಿಂದ ದೈಹಿಕ ಆರೋಗ್ಯ ವೃದ್ದಿ

ಕ್ರೀಡೆಯಿಂದ ದೈಹಿಕ ಆರೋಗ್ಯ ವೃದ್ದಿ

ಹೊಸಕೋಟೆ, ಜು. 13: ಮಕ್ಕಳು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಆರೋಗ್ಯ ವೃದ್ದಿಸಿಕೊಳ್ಳಬಹುದು ಎಂದು ಹೊಸಕೋಟೆ ಜಿಕೆಬಿಎಂಎಸ್ ಶಾಲೆಯ ದೈಹಿಕ ಶಿಕ್ಷಕಿ ಭೋರಮ್ಮಹೇಳಿದರು.

ಹೊಸಕೋಟೆಯ ಜಿಕೆಬಿಎಂಎಸ್ ಶಾಲೆಯಲ್ಲಿ ಅಪ್ಸಾ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಶಾಲಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಣೆ ನೆರವೇರಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಕಲೆ ಅಡಗಿರುತ್ತದೆ. ಕ್ರೀಡೆಯು ಸಹ ಒಂದು ಕಲೆಯಂತೆಯೇ ಕಾಣಬಹುದು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಯಲ್ಲಿ ಜ್ಞಾನ ವಿಕಸನವು ಆಗುತ್ತದೆ ಎಂದರು.

ಅಪ್ಸಾ ಸಂಸ್ಥೆಯ ಸಂಚಾಲಕಿ ಭಾಗ್ಯ ಮಾತನಾಡಿ ಇಂಟರ್ ನ್ಯಾಷನಲ್ ಹಾಗೂ ದಿಶಾ ಉಡಾನ್  ಸಂಸ್ಥೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಾ ಸಹಕಾರಿಯಾಗಿದೆ ಎಂದರು.

ಆಥ್ಲೇಟಿಕ್ ಕ್ರೀಡೆಗಳು, ಗುಂಡು ಎಸೆತ, ಎತ್ತರ ಜಗಿತ, ಥ್ರೋಬಾಲ್, ಕಬ್ಬಡಿ ಪಂದ್ಯಗಳನ್ನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೂ ನೆಡೆಸಲಾಯಿತು, ವಿಜೇಯತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನೆಡೆಯಿತು.

ಸಂಸ್ಥೆಯ ತುಳಸಿಬಾಯಿ, ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos