ಸಾಫ್ಟ್ ವೇರ್ ಎಂಜಿನಿಯರ್ ಕುರಿ ಸಾಕಾಣಿಕೆ

ಸಾಫ್ಟ್ ವೇರ್ ಎಂಜಿನಿಯರ್ ಕುರಿ ಸಾಕಾಣಿಕೆ

ರಾಮನಗರ:ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಆದರೆ, ಸದ್ಯ ಮಾಡುತ್ತಿರುವುದು ಮಾತ್ರ ಕುರಿ ಸಾಕಣೆ. ಇದು ಕನಕಪುರದ ಯುವ ರೈತರೊಬ್ಬರ ಯಶೋಗಾಥೆ.

ಈ ಮುಂಚೆ ಕೃಷ್ಣ ಸಹ ಎಲ್ಲರಂತೆಯೇ ಆರಂಭದಲ್ಲಿ ಖಾಸಗಿ ಉದ್ಯೋಗ ಹಿಡಿದರು. ಬೆಂಗಳೂರು ಸೇರಿ ಕ್ಲಸ್ಟರ್ ಎಂಬ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಒಂದಿಷ್ಟು ಕಾಲ ದುಡಿದರು. ತಕ್ಕಮಟ್ಟಿಗೆ ಸಂಪಾದನೆಯೂ ಇತ್ತು. ಆದರೆ, ಹುಟ್ಟೂರಿನಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲದಿಂದ ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡರು.
೨೦೧೨ರಲ್ಲಿ ಉದ್ಯೋಗ ಬಿಟ್ಟು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳ ಜತೆಗೆ ಕುರಿ ಸಾಕಣೆಯಲ್ಲಿ ತೊಡಗಿಸಿಕೊಂಡರು. ಅದೇ ಈಗ ಪೂರ್ಣ ಪ್ರಮಾಣದ ವೃತ್ತಿಯಾಗಿ ಉತ್ತಮ ಆದಾಯ ತಂದುಕೊಡುತ್ತಿದೆ.

ಸದ್ಯ ಕೃಷ್ಣ ಅವರ ಫಾರಂನಲ್ಲಿ ೧೫೦ಕ್ಕೂ ಹೆಚ್ಚು ಕುರಿಗಳಿವೆ. ಇವುಗಳು ಹಾಕುವ ಮರಿಗಳನ್ನು ಮಾರಾಟ ಮಾಡಿಯೇ ಅವರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಒಂದು ಕುರಿ ಪ್ರತಿ ಐದು ತಿಂಗಳಿಗೆ ತಿಂಗಳಿಗೆ ಒಮ್ಮೆ ಮರಿ ಹಾಕುತ್ತದೆ. ಅದನ್ನು ಮೂರು ತಿಂಗಳ ಕಾಲ ಸಾಗಿ ನಂತರ ಇತರರಿಗೆ ಸಾಕುವ ಉದ್ದೇಶಕ್ಕಾಗಿ ಮಾರಲಾಗುತ್ತಿದೆ. ಹೀಗೆ ಪ್ರತಿ ಎಂಟು ತಿಂಗಳಿಗೆ ಒಮ್ಮೆ ಮಾರಾಟ ನಡೆಯುತ್ತದೆ. ಒಂದು ಮರಿಗೆ ಮಾರುಕಟ್ಟೆಯಲ್ಲಿ ೮-೧೦ ಸಾವಿರ ಬೆಲೆ ಇದೆ. ಖರ್ಚೆಲ್ಲ ಕಳೆದರೂ ಪ್ರತಿ ಎಂಟು ತಿಂಗಳಿಗೆ ಕೇವಲ ಕುರಿ ಮಾರಾಟದಿಂದಲೇ ಸರಾಸರಿ ೧೦ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಆದರೆ ಅದಕ್ಕೆ ಅಷ್ಟು ಮಾರುಕಟ್ಟೆ ಇರಲಿಲ್ಲ. ಹೀಗಾಗಿ ಬಂಡೂರು ಕುರಿ ಸಾಕಲು ಆರಂಭಿಸಿದೆ. ಮೊದಲು ೨೦ ಹಾಗೂ ನಂತರ ೩೦ ಕುರಿ ತಂದೆ. ಈಗ ಅದೇ ೧೫೦ ಕುರಿಗಳಾಗಿವೆ.
ಮಾಂಸಕ್ಕೆ ಬದಲಾಗಿ ಕೇವಲ ಬಿತ್ತನೆ ಉದ್ದೇಶಕ್ಕೆ ಇವುಗಳನ್ನು ಸಾಕುತ್ತಿದ್ದೇವೆ. ಪ್ರತಿ ೮ ತಿಂಗಳಿಗೆ ಸುಮಾರು ೧೫೦ ಕುರಿಗಳ ಪೈಕಿ ಕನಿಷ್ಠ ೧೨೦ ಮರಿಗಳು ಮಾರಾಟಕ್ಕೆ ಸಿಗುತ್ತಿವೆ’ ಎಂದು ವಿವರಿಸುತ್ತಾರೆ ಕೃಷ್ಣ.

ಫ್ರೆಶ್ ನ್ಯೂಸ್

Latest Posts

Featured Videos