ವಚನಗಳ ಮೂಲಕ ಸಮಾಜ ಸುಧಾರಣೆ

ವಚನಗಳ ಮೂಲಕ ಸಮಾಜ ಸುಧಾರಣೆ

ಸಿರವಾರ, ಫೆ. 01: 12 ನೇ ಶತಮಾನದ ಅನುಭವ ಮಂಟಪದಲ್ಲಿ ಶ್ರೀ ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಜಾತಿ, ವರ್ಗ ತಾರತಮ್ಯವನ್ನು ತೊಡೆದು ಹಾಕಿ ಸಮಾಜ ಸುಧಾರಣೆಗೆ‌ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಜಿಲ್ಲಾಧಿಕಾರಿ ಕಾರ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಗೋಪಿಶೇಟ್ಟಿ ಅಭಿಪ್ರಾಯ ಪಟ್ಟರು.

ಪಟ್ಟಣ ಪಂಚಾಯತಿಯಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಸಮಾಜದಲ್ಲಿರುವ ಅಜ್ಞಾನ, ಮೂಡನಂಬಿಕೆ, ಕಂದಾಚಾರ  ಹೋಗಲಾಡಿಸಿ ಸಮಾಜ ಸುಧಾರಣೆಗೆ ಶ್ರಮಿಸಿ, ಸಮಾಜದಲ್ಲಿನ  ತಾರತಮ್ಯ ತೊಡೆದು ಹಾಕಿ ಸಮಾನತೆ ಹಾಗೂ ಸಹಬಾಳ್ವೆಗೆ ಇವರು ಕರೆ ನೀಡಿದರು. ಮಡಿವಾಳ ಸಮುದಾಯ ಸುಶಿಕ್ಷಿತರಾಗಿ ಮುಂದೆ ಬಂದು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಮಡಿವಾಳ ಮಾಚಿದೇವರ ಅನೇಕ ವಚನಗಳು ಬಸವಾದಿ ಶರಣರ ತತ್ವದ ತಳಹದಿ ಮೇಲಿವೆ. ಸಮಾಜದಲ್ಲಿನ  ಅಂಕುಡೊಂಕುಗಳನ್ನು ತಿದ್ದುವಲ್ಲಿ ಶರಣ ವಚನಗಳು ಸಹಕಾರಿಯಾಗಿವೆ. ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ತ್ಯಾಗ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಸದ್ಯಸ ಕೃಷ್ಣನಾಯಕ, ಎಪಿಎಂಸಿ ನಿರ್ದೇಶಕ ಹೆಚ್.ಕೆ.ಅಮರೇಶ, ಸುರೇಶ ಹಿರಾ, ಮಡಿವಾಳ ಸಮಾಜದ ಅದ್ಯಕ್ಷ ಹುಚ್ಚಪ್ಪ ಸೈದಾಪೂರು ಮಾತನಾಡಿದರು.

ಈ ಸಂದರ್ಭದಲ್ಲಿ ಎಇಇ ಸೋಮುರಾಠೊಡ್, ಪಟ್ಟಣ ಪಂಚಾಯತ ಮುಖ್ಯಾದಿಕಾರಿ ಓಂಪ್ರಕಾಶ, ಸಮುದಾಯ ಸಂಘಟನಾಧಿಕಾರಿ ಹಂಪಯ್ಯ, ಪದ್ಮ, ಲಕ್ಷ್ಮಿ, ಸದಸ್ಯ ಇರ್ಪಾನ್ ಬಡಗೆರ್, ಎಂ.ಎಸ್.ಖಾಸಿಂಮೊತಿ, ಸಮಾಜದ ಬಿ.ಶರಣಪ್ಪ, ಹುಲಿಗೆಪ್ಪ, ನಾಗಪ್ಪ, ಅಂಬಣ್ಣ ಕುರಕುಂದಿ, ವೆಂಕಟೇಶ ಕಮ್ಮಾರ, ರಾಜೇಶ, ಪ್ರಕಾಶ ಕರ್ಪೆಂಟರ್, ಮಲ್ಲಯ್ಯ, ರಘು, ಗಿರಿಜಪ್ಪ, ಬಸವರಾಜ, ಬುದೆಪ್ಪ, ಕರೆಪ್ಪ, ದೇವು ಸೇರಿದಂತೆ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos