ಬೆತ್ತಲೆ ದೇಹಕ್ಕೆ ಬ್ಲೇಝರ್ ಹೊಲಿಸಿದಂತಾಗಿದೆ ಸ್ಮಾರ್ಟ್ಸಿಟಿ

ಬೆತ್ತಲೆ ದೇಹಕ್ಕೆ ಬ್ಲೇಝರ್ ಹೊಲಿಸಿದಂತಾಗಿದೆ ಸ್ಮಾರ್ಟ್ಸಿಟಿ

ತುಮಕೂರು, ಡಿ. 21: ಸ್ಮಾರ್ಟ್ ಸಿಟಿ ಬೆತ್ತಲು ದೇಹಕ್ಕೆ ಬ್ಲೇಝರ್ ಹೊಲಿಸಿದ್ದಂತಾಗಿದೆ. ಒಳಗೆ ಚಡ್ಡಿ, ಪ್ಯಾಂಟ್ ಏನಿಲ್ಲ ಎಂದು ಕಾಮಗಾರಿಗಳ ಬಗ್ಗೆ ಶಾಸಕ ಜ್ಯೋತಿ ಗಣೇಶ್ ವ್ಯಂಗ್ಯ ಮಾಡಿದ್ದಾರೆ. ಕಾಮಗಾರಿಯಿಂದ ಬಿಳಿ ಆನೆ ಸಾಕಲು ಹೊರಟ್ಟಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಆಕ್ರೋಶ ಹೊರಹಾಕಿದ್ದಾರೆ. ತುಮಕೂರಿನಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಮಾಜಿ ಮತ್ತು ಹಾಲಿ ಶಾಸಕರು ಹಾಗೂ ಸಂಸದರು ಅಧಿಕಾರಿಗಳ ವಿರುದ್ದ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು.

ಹಾಲಿ ಮಾಜಿಗಳ ಕೆಸರೆರಚಾಟ

ಹಾಲಿ ಶಾಸಕ ಜ್ಯೋತಿಗಣೇಶ್ ಹಾಗೂ ಮಾಜಿ ಶಾಸಕ ರಫೀಕ್ ಅಹಮದ್ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಇಡೀ ನಗರವನ್ನು ಎಲ್ಲೆಂದರಲ್ಲಿ ಅಗೆದು ಮಣ್ಣಿನ ರಾಶಿ ಹಾಕಲಾಗಿದ್ದು, ನಗರದ ಬಹುತೇಕ ರಸ್ತೆಗಳನ್ನೆಲ್ಲ ಬಗೆದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದರೂ ಗುತ್ತಿಗೆ ನಿರ್ವಹಣೆಯ ಆಂಧ್ರ ಕಂಪನಿಗೆ ಚುರುಕು ಮುಟ್ಟಿಸಿಲ್ಲದ ಕ್ರಮವನ್ನು ಬಹಿರಂಗವಾಗಿ ಖಂಡಿಸಿ ಪ್ರತಿಭಟನೆಯ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಎಚ್ಚರಿಕೆ ನೀಡಿದ್ದರು. ನಂತರ ಶಾಸಕ ಜ್ಯೋತಿ ಗಣೇಶ್ ಮತ್ತು ಸಂಸದ ಬಸವರಾಜು ಅವರು ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ದ ಹರಿಹಾಯ್ದಿದ್ದರು.

ತುಮಕೂರು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಚೇರ್ಮನ್ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ವಿರುದ್ದ ನಗರದ ಬಹುತೇಕ ಜನಪ್ರತಿನಿಧಿಗಳು ಸ್ಮಾರ್ಟ್ಸಿಟಿ ಕಾಮಗಾರಿ ವಿಳಂಬ ಹಾಗೂ ಯೋಜನಾ ಬದ್ದವಾಗಿ ಕಾಗಾರಿ ನಿರ್ವಹಣೆ ಮಾಡದ ಗುತ್ತಿಗೆ ಪಡೆದಿರುವ ಕಂಪನಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಅಧಿಕಾರಿಗಳು ಸ್ಮಾರ್ಟ್ಸಿಟಿ ಕಾಮಗಾರಿಯನ್ನು ಮನಸೋ ಇಚ್ಛೆ ಮಾಡುತ್ತಿದ್ದಾರೆ.  ತುಮಕೂರು ನಗರಕ್ಕೆ ಅಗತ್ಯವಿರುವುದನ್ನು ಮಾಡುತ್ತಿಲ್ಲ. ಎಂದು ಅವರು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಬಿಳಿ ಆನೆ ಸಾಕುವುದಕ್ಕಾಗಿ ಯೋಜನೆ ಮಾಡಿದಂತಿದೆ.  ಸ್ಮಾರ್ಟ್ಸಿಟಿ ಬೋರ್ಡ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಡ ಹಾಕಿದ್ದರೂ ಕೂಡ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಬೆತ್ತಲೆ ದೇಹಕ್ಕೆ ಬ್ಲೇಝರ್

ಸ್ಮಾರ್ಟ್ ಸಿಟಿ ಬೆತ್ತಲು ದೇಹಕ್ಕೆ ಬ್ಲೇಝರ್ ಹೊಲಿಸಿದ್ದಂತಾಗಿದೆ. ಒಳಗೆ ಚಡ್ಡಿ, ಪ್ಯಾಂಟ್ ಏನಿಲ್ಲ ಎಂದು ಕಾಮಗಾರಿಗಳ ಬಗ್ಗೆ ಶಾಸಕ ಜ್ಯೋತಿ ಗಣೇಶ್ ವ್ಯಂಗ್ಯ ಮಾಡಿದ್ದರು ಸ್ಥಳೀಯ ಶಾಸಕರ ಮಾತಿಗೂ ಕಿಮ್ಮತ್ತು ನೀಡದ ಅಧಿಕಾರಿಗಳ ವಿರುದ್ದ ಶಾಸಕ ಜ್ಯೋತಿ ಗಣೆಶ್ ಅವರ ಮೃದು ಧೋರಣೆಯೇ ಇಷ್ಟಕ್ಕೆಲ್ಲ ಕಾರಣ ಎನ್ನುವಂತಹ ಮಾತುಗಳೂ ಕೇಳಿ ಬಂದಿದ್ದು ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಂಡು ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆಂದು ಮಾಜಿ ಮಾಜಿ ಶಾಸಕ ರಫೀಕ್ ಅಹಮದ್ ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡ ಶಾಸಕರು ಬೆತ್ತಲೆ ದೇಹಕ್ಕೆ ಬ್ಲೇಜರ್ ಅಂತ ಅಧಿಕಾರಿಗಳನ್ನು ಕುಟುಕಿದ್ದರು.

ಸಮಾಧಿಯಂತಾಗಿರುವ ನಗರ

ಮಾಜಿ ಶಾಸಕ ಡಾ. ರಫೀಕ್ ಸುದ್ದಿಗೋಷ್ಠಿ ನಡೆಸಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಡುವಿನ ಸೌಹಾರ್ಧತೆ ಸಮನ್ವಯತೆಯ ಕೊರತೆಯಿಂದಾಗಿ ಸ್ಮಾರ್ಟ್ಸಿಟಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ವಿಫಲವಾಗಿರುವುದೇ  ತುಮಕೂರು ನಗರ ಸಮಾಧಿಯಂತೆ ರೂಪುಗೊಳ್ಳಲು ಕಾರಣವೆನ್ನಲಾಗಿದೆ.

ಅಲ್ಲಲ್ಲಿ ಗುಂಡಿ ತೋಡಿ ಸಮಾಧಿಯಂತೆ ಮಾಡಿದ್ದಾರೆ. ಕಾಮಗಾರಿ ಅನುಷ್ಠಾನದ ಬಗ್ಗೆ ರಫೀಕ್ ಅಹಮದ್ ಆಕ್ರೋಶ ವ್ಯಕ್ತಪಡಿಸಿದ್ದು, ಕಾಮಗಾರಿ ಸರಿಯಾಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ನೂತನ ಆಯುಕ್ತರು ಚಾಟಿ ಬೀಸುವರೇ

ದಕ್ಷ ಮತ್ತು ಪ್ರಾಮಾಣಿಕತೆಗೆ ಹೆಸರಾದ ಭೂಬಾಲನ್ ಅವರು ಮತ್ತೆ ತುಮಕೂರು ನಗರಕ್ಕೆ ಜನತೆಯ ಒತ್ತಾಸೆಯಂತೆ ಅಧಿಕಾರ ಸ್ವೀಕರಿಸಿದ್ದಾರೆ. ಸ್ಮಾರ್ಟ್ ಸಿಟಿಯ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರು ಭೂಬಾಲನ್ ಅವರಿಗೆ ಈಗಾಗಲೇ ಬಹುತೇಕ ಸ್ಮಾರ್ಟ್ಸಿಟಿ ಚಿತ್ರಣದ ಅರಿವಿದ್ದು,ಅದ್ವಾನದ ಕೊಂಪೆಯಾಗಿರುವ ಸ್ಮಾಟ್ ಸಿಟಿ ಯೋಜನೆಗೆ ಚುರುಕು ಮುಟ್ಟಿಸುತ್ತಾರೆಂಬ ಆಶಯ ತುಮಕೂರಿನ ನಾಗರೀಕರದ್ದಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos