ಸಿಂಗ ಕನ್ನಡ ಚಿತ್ರದ, ಡಬ್ಬಿಂಗ್ ಶುರು..!

ಸಿಂಗ ಕನ್ನಡ ಚಿತ್ರದ, ಡಬ್ಬಿಂಗ್ ಶುರು..!

ಬೆಂಗಳೂರು, ಫೆ.28, ನ್ಯೂಸ್ಎಕ್ಸ್ ಪ್ರೆಸ್: ಮದುವೆಯ ನಂತ್ರ ಚಿರಂಜೀವಿ ಸರ್ಜಾ ಚಿತ್ರೀಕರಣದಲ್ಲಿ ಭಾಗಿಯಾದ ಸಿಂಗ ಚಿತ್ರದ ಚಿತ್ರೀಕರಣ ಮುಗಿದಿದೆ​. ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ಸಿಂಗ ಚಿತ್ರಿಕರಣ​ ನಡೆದಿದೆ. ಯು ಕೆ ಎಂ ಸ್ಟುಡಿಯೋಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸುತ್ತಿರೋ ಚಿತ್ರದ ಡಬ್ಬಿಂಗ್​ ಕಾರ್ಯ ಸದ್ಯ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಡೀತಿದೆ. ಈ ಹಿಂದೆ ಚಿರಂಜೀವಿ ಸರ್ಜಾ ಅವರು ನಟಿಸಿದ್ದ ರಾಮ್‍ಲೀಲಾ`ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಚಿರು ಹಾಗೂ ವಿಜಯ್​ ಕಿರಣ್​ ಕಾಂಬಿನೇಷನ್​ನ ಎರಡನೇ ಚಿತ್ರ

ಚಿತ್ರಕ್ಕೆ ಕಿರಣ್ ಹಂಪಾಪುರ ಕ್ಯಾಮರಾ ಕೈಚಳಕವಿದ್ದು, ಧರ್ಮ ವಿಶ್ ಮ್ಯೂಸಿಕ್​ ಕಂಪೋಸ್​ ಮಾಡಿದ್ದಾರೆ. ಕೆ.ರವಿವರ್ಮ, ಪಳನಿರಾಜ್ ಚಿತ್ರದ ಫೈಟ್​ಗಳಿಗೆ ಸ್ಟಂಟ್​ ಕಂಫೋಸ್​ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಚೇತನ್ ಸಿಂಗ`ಸಿಂಗ ಚಿತ್ರಕ್ಕೆ ಹಾಡುಗಳನ್ನ ಬರೆದಿದ್ದಾರೆ. ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ರವಿಶಂಕರ್, ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಚಿತ್ರದ ಸ್ಟಾರ್​ ಕಾಸ್ಟ್​ನಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos