ಶುಂಠಿ ಬೆಲೆ ಕುಸಿತ

ಶುಂಠಿ ಬೆಲೆ ಕುಸಿತ

ಬೆಂಗಳೂರು, ಜು. 20 : ಕರ್ನಾಟಕದಿಂದ ರಾಜಸ್ತಾನ, ಅಮೃತ್ಸರ, ಜೈಪುರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಗೆ ಶುಂಠಿ ಸರಬರಾಜಾಗುತ್ತದೆ. ಪ್ರಮುಖ ಮಾರಾಟ ಕೇಂದ್ರಗಳಾದ ಹಾಸನ, ಶಿವಮೊಗ್ಗದ ಶಿಕಾರಿಪುರ ಮಾರುಕಟ್ಟೆಯಲ್ಲಿ 60 ಕೆ.ಜಿ. ಚೀಲಕ್ಕೆ (ಸ್ವಚ್ಚಗೊಳಿಸಿದ ಕಚ್ಚಾ ಹೊಸ ಶುಂಠಿ) 4200 – 4300 ರು. ಇದೆ. ಈ ಹಿಂದೆ 5500 ರಿಂದ 6000ಕ್ಕೆ ಖರೀದಿಯಾಗಿತ್ತು. ಹಳೆಯ ಶುಂಠಿ ಗುಣಮಟ್ಟದ್ದು 8000 ರಿಂದ 8500 ರು., ವಿವಿಧ ಗುಣಮಟ್ಟದ ಪೂರ್ಣ ಒಣ ಶುಂಠಿ 10 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ ಎಂದು ಹಾಸನ ಕಿಸಾನ್ ಟ್ರೇಡರ್ಸ್ ಮಾಲೀಕರಾದ ರಾಜಗೋಪಾಲ್ ತಿಳಿಸಿದರು.
ರಾಜ್ಯದ ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ 10 ಸಾವಿರ ರು. ಗಡಿ ದಾಟಿದ್ದ ಶುಂಠಿ ಬೆಲೆ, ಈಗ ಹೊಸ ಬೆಳೆ ಬಂದಿರುವ ಹಿನ್ನೆಲೆಯಲ್ಲಿ ಕಡಿಮೆಯಾಗಿದೆ. ಪ್ರಸ್ತುತ ಹಳೆಯ ಶುಂಠಿ 60 ಕೆ.ಜಿ.ಗೆ 8000 ರಿಂದ 8500 ರು, ಹೊಸ ಶುಂಠಿ 60 ಕೆ.ಜಿ.ಗೆ 4500 ರಿಂದ 4300 ರು.ಗೆ ಮಾರಾಟವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆ, ಕೊಳೆ ರೋಗ, ಹವಾಮಾನ ವೈಪರೀತ್ಯ, ಬೆಲೆ ಕುಸಿತದಂತಹ ಕಾರಣಗಳಿಂದಾಗಿ ಶುಂಠಿ ಬೆಳೆಗಾರರು ನಷ್ಟಕ್ಕೆ ಒಳಗಾಗುತ್ತಿದ್ದ ಕಾರಣದಿಂದ ಕೆಲವು ಬೆಳೆಗಾರರು ಶುಂಠಿ ಕೃಷಿ ಸಹ ತ್ಯಜಿಸಿದ್ದರು. ಇದರಿಂದಾಗಿ ಉತ್ಪಾದನೆಯಲ್ಲಿ ಕುಸಿತವಾಗಿತ್ತು. ಕಳೆದ ಮೇ ಅಂತ್ಯಕ್ಕೆ ಕನಿಷ್ಠ 5200 ರಿಂದ ಗರಿಷ್ಠ 9000 ದವರೆಗೆ ತಲುಪಿತ್ತು. ಚಿಲ್ಲರೆ ಹಾಗೂ ಸಗಟು ಮಾರುಕಟ್ಟೆಗಳಲ್ಲೂ ಕೆ.ಜಿ.ಗೆ

ಫ್ರೆಶ್ ನ್ಯೂಸ್

Latest Posts

Featured Videos