ಪಾಕ್ ಪರ ಕೂಗು: ಆರೋಪಿಗಳ ಪರ ವಕಾಲತ್ತಿಗೆ ಅರ್ಜಿ

ಪಾಕ್ ಪರ ಕೂಗು: ಆರೋಪಿಗಳ ಪರ ವಕಾಲತ್ತಿಗೆ ಅರ್ಜಿ

ಹುಬ್ಬಳ್ಳಿ, ಫೆ. 28: ಹುಬ್ಬಳ್ಳಿ ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದ ಮೂವರು ವಿದ್ಯಾರ್ಥಿಗಳ ಪರವಾಗಿ ವಕಾಲತ್ತು ಅರ್ಜಿ ಸಲ್ಲಿಸಲು ಬೆಂಗಳೂರಿನ ವಕೀಲರು ಆಗಮಿಸಿದ್ದು, ಈ ಸಂಬಂಧ ಧಾರವಾಡ ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು, ಕೋರ್ಟ್ ಆವರಣದಲ್ಲಿ 144 ಕಲಂ ಜಾರಿ ಮಾಡಿ ಆದೇಶಿಸಲಾಗಿದೆ.

ಬೆಂಗಳೂರಿನಿಂದ ಬಂದ ಮೂವರು ವಕೀಲರ ತಂಡ ಬೆಳಗಾವಿಗೆ ತೆರಳಿ ಇಲ್ಲಿನ ಹಿಂಡಲಗಾ ಜೈಲಿನಲ್ಲಿರುವ ಮೂವರು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ವಕಾಲತ್ತು ಅರ್ಜಿಗೆ ಸಹಿಯನ್ನು ಪಡೆದು ತಮಗೆ ಬೇಕಾದ ಇತರ ಮಾಹಿತಿಗಳನ್ನು ಪಡೆಯಿತು. ಅಲ್ಲಿಂದ ಧಾರವಾಡದ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ವಕಾಲತ್ತು ಅರ್ಜಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡ ಕೋರ್ಟ್ ಆವರಣದಲ್ಲಿ ಸುಮಾರು 500 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಸರ್ಪಗಾವಲನ್ನು ಹಾಕಲಾಗಿದೆ. ಅಲ್ಲದೆ ಕೋರ್ಟ್ ಆವರಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಆಯುಕ್ತರಾದ ಆರ್. ದಿಲೀಪ್ 144ಕಲಂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ಈ ಹಿಂದೆ ಬೆಂಗಳೂರಿನಿಂದ ಧಾರವಾಡಕ್ಕೆ ಆಗಮಿಸಿದ್ದ ವಕೀಲರಿಗೆ ಸ್ಥಳೀಯ ವಕೀಲರು ಆರೋಪಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ಅಡ್ಡಿಪಡಿಸಿದ್ದರಲ್ಲದೆ, ಅವರ ಕಾರಿನ ಗಾಜುಗಳನ್ನು ಪುಡಿ ಮಾಡಿದ್ದರು.

ನಂತರ ಈ ಘಟನೆ ಅವಲೋಕಿಸಿದ ಉಚ್ಚ ನ್ಯಾಯಾಲಯ ಧಾರವಾಡ ವಕೀಲರ ನಡೆ ಹಾಗೂ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿದ್ದ ನಿರ್ಣಯಕ್ಕೆ ಅತೃಪ್ತಿ ವ್ಯಕ್ತಪಡಿಸಿ ವಕೀಲರು ಪುನ: ಇದೇ ರೀತಿ ನಡೆದುಕೊಂಡರೆ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos