ಶೂಟಿಂಗ್ ವೇಳೆ ಶಾಹಿದ್ ಗೆ ಗಾಯ

ಶೂಟಿಂಗ್ ವೇಳೆ ಶಾಹಿದ್ ಗೆ ಗಾಯ

ಮುಂಬೈ, ಜ.12 : ಬಾಲಿವುಡ್ ನಟ ಶಾಹಿದ್ ಕಪೂರ್ ‘ಜೆರ್ಸಿ‘ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಶೂಟಿಂಗ್ ವೇಳೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದಾರೆ.

ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಬಾಲಿವುಡ್ ಪರದೆಯ ಮೇಲೆ ಈ ಸಿನಿಮಾ ಮೂಡಿ ಬರುತ್ತಿದೆ. ಹಿಂದಿ ಭಾಷೆಯಲ್ಲಿ ಮೂಡಿ ಬರುತ್ತಿರುವ ‘ಜೆರ್ಸಿ‘ ಸಿನಿಮಾದಲ್ಲಿ ನಾಯಕನಾಗಿ ಶಾಹಿದ್ ಕಪೂರ್ ಅಭಿನಯಿಸುತ್ತಿದ್ದಾರೆ. ಹಾಗಾಗಿ ಚಿತ್ರಿಕರಣದಲ್ಲಿ ಶಾಹಿದ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗ ಶಾಹಿದ್ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣ ಶಾಹಿದ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವಿಷಯ ತಿಳಿದ ಶಾಹಿದ್ ಪತ್ನಿ ಮೀರಾ ರಜ್ಪುತ್ ಕೂಡಲೇ ಚಂಢೀಗಢ್ಗೆ ಬಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos