ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅಮೆರಿಕ ಪ್ರಥಮ ಮಹಿಳೆ

ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅಮೆರಿಕ ಪ್ರಥಮ ಮಹಿಳೆ

ನವದೆಹಲಿ, ಫೆ. 25: ನೆನ್ನೆಯಿಂದ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ, ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ತಮ್ಮ 2ನೇ ಪ್ರವಾಸದ ದಿನವಾದ ಇಂದು ದೆಹಲಿಯ ಸರ್ಕಾರಿ ಶಾಲೆ Co-Ed ಹಿರಿಯ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿದ್ದಾರೆ.

ಈ ವೇಳೆ ಮೆಲಾನಿಯಾ ಟ್ರಂಪ್ ಹಣೆಗೆ ವಿದ್ಯಾರ್ಥಿಗಳು ಕುಂಕುಮ ಹಚ್ಚುವ ಮೂಲಕ, ಮತ್ತು ಹೂ ಗುಚ್ಛ ನೀಡಿ ಆಹ್ವಾನಿಸಿದ್ದಾರೆ. ಜೊತೆಗೆ ವಾದ್ಯಗಳನ್ನ ಮೊಳಗಿಸುವ ಮೂಲಕ ಮೆಲಾನಿಯಾ ಟ್ರಂಪ್ ಅವರಿಗೆ ಸರ್ಕಾರ ಶಾಲೆ ಸ್ವಾಗತ ಕೋರಿದೆ. ಸರ್ಕಾರಿ ಶಾಲೆಗೆ ಭೇಟಿ ನೀಡುವ ಕಾರ್ಯಕ್ರಮ ಮೆಲಾನಿಯಾ ಟ್ರಂಪ್ ರ ಎರಡು ದಿನಗಳ ಪ್ರವಾಸ ಪಟ್ಟಿಯಲ್ಲಿ ಒಂದಾಗಿದ್ದು, ಅವರು ಸರ್ಕಾರಿ ಶಾಲೆಯ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos