ಸಿಎಬಿ ಜಾರಿ ವಿರುದ್ಧ ಮುಸ್ಲಿಮ್ ಸಂಘಟನೆಗಳಿಂದ ತೀವ್ರ ವಿರೊದ

ಸಿಎಬಿ ಜಾರಿ ವಿರುದ್ಧ ಮುಸ್ಲಿಮ್ ಸಂಘಟನೆಗಳಿಂದ ತೀವ್ರ ವಿರೊದ

ಕೆ.ಆರ್.ಪುರ, ಡಿ. 14: ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಪೌರತ್ವ ತಿದ್ದುಪಡಿ ವಿದೇಯಕವನ್ನು ಜಾರಿ ಗೊಳಿಸ ಬಾರದೆಂದು ಒತ್ತಾಯಿಸಿ ವಿಜಿನಾಪುರ ಅಹ್ಲೆ ಸುನ್ನತ್ ಜಮಿಯತುಲ್ ಮುಸ್ಲಿಮೀನ್ ಜಾಮೇ ಮಸಿದ್ಜ್ ವತಿಯಿಂದ ಪ್ರತಿಭಟನೆ ಮಾಡಿದರು.

ಪೌರತ್ವ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದು, ಕ್ಷೇತ್ರದ ವಿಜಿನಾಪುರ ಭಾಗದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಮಸಿದ್ಜ್ ನಿಂದ ಎಫ್.ಸಿ.ಐ ಗೋದಾಮಿನ ವರೆಗೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಎನ್.ಆರ್.ಸಿ ಹಾಗೂ ಸಿಎಬಿ ಕಾಯಿದೆ ಜಾರಿಗೊಳಿಸುವದನ್ನು ಕೂಡಲೆ ಹಿಂಪಡಿಯ ಬೇಕೆಂದೇ ಒತ್ತಾಯಿಸಿದರು.

ಸಂವಿಧಾನದಲ್ಲಿ ಅಳವಡಿಸಿರುವ ಕಾಯಿದೆ ತಿದ್ದುಪಡಿ ಮಾಡುವುದರಿಂದ ದೇಶವಾಸಿಗಳಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ರಾಜ್ಯ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ನಂತರ ಮುಸ್ಲಿಂ ಸಂಘಟನೆಗಳ ಮುಖಂಡರು ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ.ರ.ವೇ ಯುವಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುನ್ನ ಆಜ್, ಮುಖಂಡರಾದ, ಸೈಯದ್ ಆಯುಬ್, .ಆರ್.ಪುರ ಸುಲ್ತಾನ್ ಮೀರ್ಜಾ, ಸೈಯದ್ ಅನ್ವರ್, ಇಮ್ರಾನ್, ಸೇರಿದಂತೆ ಎಲ್ಲಾ ಮಸೀದಿ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos