ಹಿರಿಯ ಕಮ್ಯುನಿಸ್ಟ್ ನಾಯಕ ಡಿ. ಪಾಂಡಿಯಾನ್ ನಿಧನ

ಹಿರಿಯ ಕಮ್ಯುನಿಸ್ಟ್ ನಾಯಕ ಡಿ. ಪಾಂಡಿಯಾನ್ ನಿಧನ

ಚೆನ್ನೈ :  ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ, 2 ಬಾರಿ ಲೋಕಸಭಾ ಸದಸ್ಯರಾಗಿದ್ದ ಡಿ. ಪಾಂಡಿಯಾನ್ (88) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಸಿಪಿಐ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದ ಪಾಂಡಿಯಾನ್, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಪಿ. ಜವಾಹರ್‌ನನ್ನು ಅಗಲಿದ್ದಾರೆ.

1932ರಲ್ಲಿ ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಬಳಿಯ ಕೀಝವೆಲ್ಲೈ ಮಲೈಪಟ್ಟಿಯಲ್ಲಿ ಜನಿಸಿದ ಇವರು 1948ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ದೇಶದಲ್ಲಿ ಕಮ್ಯೂನಿಸ್ಟ್ ಪಾರ್ಟಿ ನಿಷೇಧಿಸಿದ್ದಾಗ ಬಂಧನಕ್ಕೊಳಗಾಗಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಕರೈಕುಡಿಯ ಅಲಗಪ್ಪ ಕಾಲೇಜಿನಿಂದ ಪದವಿ ಮುಗಿಸಿದ ಪಾಂಡಿಯಾನ್ ನಂತರ ಅದೇ ವಿಭಾಗದಲ್ಲಿ ಬೋಧಕರಾಗಿ ಕೆಲಸಕ್ಕೆ ಸೇರಿದ್ದರು. ಅವರ ಪತ್ನಿಜಾಯ್ಸ್ ಅದೇ ವಿಭಾಗದಲ್ಲಿ ಶಿಕ್ಷಕಿಯಾಗಿದ್ದರು.

1962ರಲ್ಲಿ, ಅವರು ತಮ್ಮ ಬೋಧನಾ ಕೆಲಸ ತೊರೆದು ಪಕ್ಷದ ಸಾಹಿತ್ಯ ವಿಭಾಗ ಪೋಷಿಸಲು ಚೆನ್ನೈಗೆ ಸ್ಥಳಾಂತರಗೊAಡರು. ರೈಲ್ವೆ ಮತ್ತು ಬಂದರಿನಲ್ಲಿ ಟ್ರೇಡ್ ಯೂನಿಯನ್ ಕಾರ್ಯಕಾರಿಯಾಗಿಯೂ ಸೇವೆ ಸಲ್ಲಿಸಿದರು. 1970ರ ದಶಕದ ಉತ್ತರಾರ್ಧದಲ್ಲಿ ಅವರು ಯುನೈಟೆಡ್ ಕಮ್ಯುನಿಸ್ಟ್ ಪಾರ್ಟಿಆಫ್ ಇಂಡಿಯಾ ತೊರೆದು 2ನೇ ಬಾರಿಗೆ ಸಿಪಿಐ ಒಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1990 ರ ದಶಕದ ಉತ್ತರಾರ್ಧದಲ್ಲಿ ಅವರು ತಮ್ಮ ಪಕ್ಷವನ್ನು ಸಿಪಿಐಗೆ ವಿಲೀನಗೊಳಿಸಿದರು. 1989, 1991ರಲ್ಲಿ ಚೆನ್ನೈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos