ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ವಿಜಯಪೂರ ಜಿಲ್ಲೆಯಿಂದ ವಿಧ್ಯಾರ್ಥಿನಿ ಆಯ್ಕೆ

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ವಿಜಯಪೂರ ಜಿಲ್ಲೆಯಿಂದ ವಿಧ್ಯಾರ್ಥಿನಿ ಆಯ್ಕೆ

ಹುಬ್ಬಳ್ಳಿ, ಜ. 17: ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಹಾಗೂ ಪರೀಕ್ಷಾ ಸಮಯದಲ್ಲಿ ಹೇಗೆಲ್ಲಾ ತಯಾರಿ ನಡೆಸಬೇಕು? ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಸ್ಪತ: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಆಯ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜನವರಿ 20ರಂದು ನವದೆಹಲಿಯಲ್ಲಿ ನಡೆಯುಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರ ಕರ್ನಾಟಕದ ಬಸವನಾಡು ಎಂದೇ ಹೆಸರುವಾಸಿಯಾದ ವಿಜಯಪೂರ ಜಿಲ್ಲೆಯ ಬಸವಜನ್ಮಸ್ಥಳ ಬಸವನ ಬಾಗೇವಾಡಿಯಿಂದ (R M S )ಸರಕಾರಿ ಆದರ್ಶ ವಿದ್ಯಾಲಯ ಹುಣಶ್ಯಾಳ ಪಿ.ಬಿ   ಶಾಲೆಯ ವಿಧ್ಯಾರ್ಥಿನಿ ಕು.ಶ್ವೇತಾ ಜಲಪೂರ ಆಯ್ಕೆಯಾಗಿದ್ದಾರೆ.

ಪರೀಕ್ಷೆ ಬಂತೆಂದೆರೆ ಸಾಕು ವಿದ್ಯಾರ್ಥಿಗಲ್ಲಿ ಆತಂಕ ಮನೆ ಮಾಡುತ್ತದೆ. ಪರೀಕ್ಷಾ ಭಯ ಇನ್ನಿಲ್ಲದಂತೆ ಅವರನ್ನು ಕಾಡುತ್ತದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಸಮಪರ್ಕವಾಗಿ ಎದುರಿಸಲಾಗದೆ ಫೇಲ್ ಆಗುವುದು ಸಾಮಾನ್ಯವಾಗಿದೆ. ಕಡಿಮೆ ಅಂಕಗಳಿಸಿ ಖಿನ್ನತೆಗೆ ಗುರಿಯಾಗುತ್ತಾರೆ. ಇದೆನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಆಯ್ದ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಈ ಬಾರಿ ವಿಜಯಪೂರ ಜಿಲ್ಲೆಯಿಂದ ಶ್ವೇತಾ ಜಲಪೂರ ಆಯ್ಕೆಯಾಗಿದ್ದು ಸಂತೋಷದ ಹೆಮ್ಮೆಯ ವಿಷಯವಾಗಿದೆ ಎಂದು ವಿಶ್ವ ಬಂಧು ಬಸವ ಸಮಿತಿಯ ಅಧ್ಯಕ್ಷ ರಾಜುಗೌಡ ಚಿಕ್ಕೊಂಡ ಹೇಳಿದರು

ಬಸವಜನ್ಮಸ್ಥಳದ ಸರಕಾರಿ ಆದರ್ಶ ವಿದ್ಯಾಲಯ ಹುಣಶ್ಯಾಳ ಪಿ.ಬಿ ವಿದ್ಯಾರ್ಥಿನಿ ಕು.ಶ್ವೇತಾ ಜಲಪೂರ ಮಾಡಿದ ಪ್ರಯತ್ನ ನಿಜಕ್ಕೂ ಮೆಚ್ಚಲೇಬೇಕು, ಪ್ರತಿಯೊಂದು ವಿದ್ಯಾರ್ಥಿಗಳು  ತಮ್ಮದೇ ಆದ ಗುರಿಯನ್ನು ಹೊಂದಿ ಇಂತಹ ಸ್ಪರ್ಧಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ನಿರಂತರವಾದ ಪ್ರಯತ್ನ ಹೊಂದಿದರೇ ಇಂತಹ ಸಾಧನೆ ಮಾಡಲು ಸಾಧ್ಯ ಮತ್ತು ದೇಶದ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಾಗ್ಯ ಒಲಿದು ಬಂದಿರುವದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ವಿಶ್ವ ಬಂಧು ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಅಮರೇಶ ಮಿಣಜಗಿ ಮಾತನಾಡಿದರು.

ಕು.ಶ್ವೇತಾ ಜಲಪೂರ ಅವರ ಬಸವನಾಡಿನ ವಿಶ್ವ ಬಂಧು ಬಸವ ಸಮೀತಿ ಕಾರ್ಯಕರ್ತರು ಶ್ವೇತಾ ಜಲಪೂರ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿ ಸತ್ಕರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯ S.T.ಹರಿಜನ ಅಧ್ಯಕ್ಷತೆ ವಹಿಸಿದ್ದರು, ರಂಜಾನ ಕಂಬಾರ ಪ್ರಾಸ್ತಾವಿಕ ಮಾತನಾಡಿದರು. ದೀಪಕ್ ದನದಮನೆ ಸ್ವಾಗತಿಸಿ ನಿರೂಪಿಸಿದರು, ಪತ್ರಕರ್ತ ನಾಗೇಶ ನಾಗೂರ, ಕುಮಾರಗೌಡ ಪಾಟೀಲ, ಪ್ರಸನ್ ಹೆಗಡೆ, ಸಂಜಯ ವಿದಾತೆ, ಶರಣಬಸಪ್ಪ ಕೀಲಾರಹಟ್ಟಿ, ಸುನೀತಾ ಬೆಳವಿಗಿ. ಶ್ರೀದೇವಿ ಢವಳಗಿ, ರೂಪಾ ಹಯ್ಯಾಳ, ಶಾಲೆಯ ಸಿಬ್ಬಂದಿಗಳು ಶುಭ ಹಾರೈಸಿ ಅಭಿನಂದಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos