ಪಟ್ಟದಕಲ್ಲು ಸೊಬಗ ನೋಡಿ

ಪಟ್ಟದಕಲ್ಲು ಸೊಬಗ ನೋಡಿ

ಪಟ್ಟದಕಲ್ಲು, ನ. 07: ಪಟ್ಟದಕಲ್ಲು ಕರ್ನಾಟಕ ರಾಜ್ಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗುoಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ – ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ – ಎರಡನ್ನೂ ಇಲ್ಲಿ ಕಾಣಬಹುದು.

ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವoಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವoಶದ ಅರಸರು 7ನೇ ಮತ್ತು 8ನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒoಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿoತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು 740 ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು 2ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಲಾಯಿತು.

ಚಾಳುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಗೈದ ನಂತರವೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ ‘ಪಟ್ಟದಕಲ್ಲು’ ಎಂಬ ಹೆಸರು ಬಂದಿದೆ. ಕ್ರಿ ಶ 150ರಷ್ಟು ಹಿಂದೆಯೇ ಇತಿಹಾಸದಲ್ಲಿ ಈ ಊರಿನ ಪ್ರಸ್ತಾಪ ಸಿಗುತ್ತದೆ.

ಈ ಸಮುಚ್ಚಯದಲ್ಲಿನ ಗಮನಸೆಳೆಯುವ ಪ್ರಮುಖ ದೇವಾಲಯಗಳೆಂದರೆ ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳು. ಈ ಎರಡೂ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು 2ನೇ ವಿಕ್ರಮಾದಿತ್ಯನು ತಮ್ಮ ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ ಇಬ್ಬರು ರಾಣಿಯರು ಕಟ್ಟಿಸಿರುವುದು.

ಮಲ್ಲಿಕಾರ್ಜುನ ದೇವಾಲಯ

ವಿರೂಪಾಕ್ಷ ದೇವಾಲಯ ಒಂದು ಪರಿಪೂರ್ಣ ದೇವಾಲಯ ವಾಸ್ತುವಿಗೆ ಉದಾಹರಣೆಯಾಗಿದೆ. ಇದು ಕ್ರಿ ಶ 740ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು, ಮುಂದಿರುವ ತೆರೆದ ಮಂಟಪದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ.

ಇದರ ಪಕ್ಕದಲ್ಲಿರುವುದೇ ಮಲ್ಲಿಕಾರ್ಜುನ ದೇವಾಲಯ. ಇದನ್ನು ವಿಕ್ರಮಾದಿತ್ಯನ ಮತ್ತೊಬ್ಬ ರಾಣಿ ತ್ರೈಲೋಕ್ಯದೇವಿಯು ಕ್ರಿ ಶ 743ರಲ್ಲಿ ನಿರ್ಮಿಸಿದಳು. ಈಗ ಇದು ಬಹುತೇಕ ಹಾಳಾಗಿದ್ದು, ನೋಡುಗರಿಗೆ ಹಿಂದೊಮ್ಮೆ ಇದ್ದಿರಬಹುದಾದ ವೈಭವವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ.

ಇವೆರಡು ದೇವಾಲಯಗಳ ಹೊರತಾಗಿ ಇಲ್ಲಿನ ಸಮುಚ್ಚಯದಲ್ಲಿ ಕಾಶಿ ವಿಶ್ವನಾಥ, ಪಾಪನಾಥ ಹಾಗು ಜಿನಾಲಯಗಳೂ ಇವೆ. ಜಿನಾಲಯದಲ್ಲಿನ ಕಲ್ಲಿನ ಆನೆಗಳು ಹಾಗು ಮೇಲ್ಮಹಡಿಗೆ ಹೋಗಲು ಇರುವ ಕಲ್ಲಿನ ಏಣಿಗಳು ತುಂಬ ಆರ್ಷಕವಾಗಿವೆ.

 

 

ಫ್ರೆಶ್ ನ್ಯೂಸ್

Latest Posts

Featured Videos