ಅಂಜನಾದ್ರಿ ಬೆಟ್ಟ ನೋಡಿ

ಅಂಜನಾದ್ರಿ ಬೆಟ್ಟ ನೋಡಿ

 ಕೊಪ್ಪಳ, ಡಿ. 24: ಕೊಪ್ಪಳವು ಕರ್ನಾಟಕದಲ್ಲಿರುವ ಒಂದು ಐತಿಹಾಸಿಕ ತಾಣವಾಗಿದೆ. ಕೊಪ್ಪಳವನ್ನು ಕೊಪ್ಪ ನಗರ ಎಂದು ಕರೆಯಲಾಗುತ್ತಿತ್ತು. ಕೊಪ್ಪಳವನ್ನು ಗಂಗರು, ಹೊಯ್ಸಳರು, ಚಾಲುಕ್ಯರು ಈ ನಗರವನ್ನು ಆಳಿದ್ದಾರೆ. ರಾಮಾಯಣದ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಂಜನಾದ್ರಿ ಬೆಟ್ಟವನ್ನು ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಆಂಜನೇಯನಿಗೆ ಗೌರವವಾಗಿ ಈ ಸುಂದರವಾದ ಹನುಮಾನ್ ದೇವಾಲಯವನ್ನು ನಿರ್ಮಿಸಲಾಗಿತ್ತು. ಈ ದೇವಾಲಯವು ಅಂಜನಾದ್ರಿ ಬೆಟ್ಟದ ಮೇಲಿದೆ.

570 ಮೆಟ್ಟಿಲುಗಳನ್ನು ಹತ್ತಬೇಕು: ಅಂಜನಾದ್ರಿ ಬೆಟ್ಟದ ಮೇಲಿರುವ ಈ ಹನುಮಾನ್ ದೇವಸ್ಥಾನವನ್ನು ತಲುಪಲು ಪ್ರವಾಸಿಗರು 570 ಮೆಟ್ಟಿಲುಗಳನ್ನು ಹತ್ತಬೇಕು. ದೇವಸ್ಥಾನಕ್ಕೆ ಹೋಗುವಾಗ ಬೆಟ್ಟ ಹತ್ತುವಾಗ ಹಲವಾರು ಕೋತಿಗಳು ಎದುರಾಗುತ್ತವೆ.

ತುಂಗಾ ಭದ್ರಾ ನದಿ ತಟದಲ್ಲಿರುವ ಪರ್ವತ: ತುಂಗಾ ಭದ್ರಾ ನದಿಯ ತಟದಲ್ಲಿ ನಿಂತಿರುವ ಅಂಜನಾದಿ ಪರ್ವತ ನಿಜಕ್ಕೂ ನಯನ ಮನೋಹರವಾಗಿದೆ. ಈ ಬೆಟ್ಟಗಳ ಶ್ರೇಣಿಯನ್ನು ನೋಡುತ್ತಾ ಹೋದಂತೆ ನಮಗೆ ಕಾಣಿಸುವುದು ಹೇಮಕೂಟ ಪರ್ವತ, ಮಾತಂಗ ಪರ್ವತ, ಋಶ್ಯ ಮೂಕ ಪರ್ವತ ಮತ್ತು ಅಂಜನಾದಿಪರ್ವತ. ಬೆಟ್ಟದ ತುದಿಯಲ್ಲಿ ಭಗವಾನ್ ಹನುಮಾನ್ ದೇವಾಲಯವಿದ್ದು, ಅಲ್ಲಿ ಹನುಮಾನ್ ಜಯಂತಿ ಮತ್ತು ಇತರ ಸಂಬಂಧಿತ ಆಚರಣೆಗಳನ್ನು ಆಚರಿಸಲು ಭಕ್ತರು ಸೇರುತ್ತಾರೆ.

ಸಮುದ್ರಮಟ್ಟದಿಂದ 600 ಮೀ ಎತ್ತರದಲ್ಲಿದೆ: ಸಮುದ್ರಮಟ್ಟದಿಂದ ಸುಮಾರು 600 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವನ್ನು ಹತ್ತುತ್ತಿದ್ದಂತೆ ಇಲ್ಲಿನ ಮಹಾದ್ವಾರವು ನಮ್ಮನ್ನು ಸ್ವಾಗತಿಸುತ್ತದೆ. ಬೆಟ್ಟವನ್ನು ಹತ್ತಿದ ನಂತರ ನಮ್ಮ ಕಣ್ಣಿಗೆ ಕಾಣಿಸುವುದು ಆಂಜನೇಯ ಸ್ವಾಮಿಯ ವಿಗ್ರಹ.

ಹಂಪಿಯಿಂದ 23ಕೀ ಮೀ ದೂರದಲ್ಲಿದೆ: ಅಂಜನಾದ್ರಿ ಬೆಟ್ಟವು ಹಂಪಿಯಿಂದ ಅಂದಾಜು 23ಕೀ ಮೀ ದೂರದಲ್ಲಿದೆ. ಅಂಜನಾದ್ರಿ ಬೆಟ್ಟದ ಮೇಲೆ ನಿಂತು ನೋಡಿದರೆ ಹಂಪಿಯಲ್ಲಿರುವ ದೇವಸ್ಥಾನಗಳೆಲ್ಲಾ ಕಾಣಿಸುತ್ತವೆ. ತುಂಗಭದ್ರಾ ನದಿಯನ್ನು ನಾವು ಕಾಣಬಹುದು. ಅಂಜನಾದ್ರಿಯ ಆಂಜನೇಯ ಗುಡಿಯು ಬಹಳ ಹಳೆಯ ಹಾಗೂ ಚಿಕ್ಕದಾದ ಕಲ್ಲಿನ ದೇವಸ್ಥಾನವಾಗಿದೆ. ಅಂಜನಾದೇವಿಗೆ ಅರ್ಪಿತವಾದ ದೇವಾಲಯ: ಭಗವಾನ್ ಹನುಮಾನ್ ಮತ್ತು ಅವರ ತಾಯಿ ಅಂಜನಾದೇವಿಗೆ ಅರ್ಪಿತವಾದ ಈ ದೇವಾಲಯವು 60 ಅಡಿಗಳ ಪತನದ ಪಕ್ಕದಲ್ಲಿ ಒಂದು ತುದಿಯಲ್ಲಿ ನೆಲೆಸಿದೆ. ಈ ದೇವಾಲಯವನ್ನು ಬಾಬಾ ಮತ್ತು ಇಲ್ಲಿ ವಾಸಿಸುವ ಕೆಲವು ಶಿಷ್ಯರು ನಿರ್ವಹಿಸುತ್ತಿದ್ದಾರೆ. ಈ ದೇವಾಲಯದಲ್ಲಿ ಬಂಡೆಯ ಕೆತ್ತಿದ ಹನುಮಾನ್ ವಿಗ್ರಹವಿದೆ.

ಫ್ರೆಶ್ ನ್ಯೂಸ್

Latest Posts

Featured Videos