ದೇವ ಶಿವನಿಗೆ ರೈಲಿನಲ್ಲಿ ‘ಸೀಟ್ ನ.-64’ ರಿಸರ್ವ್ಡ್!

ದೇವ ಶಿವನಿಗೆ ರೈಲಿನಲ್ಲಿ ‘ಸೀಟ್ ನ.-64’ ರಿಸರ್ವ್ಡ್!

ವಾರಾಣಸಿ, ಫೆ. 17: ಸಾಮಾನ್ಯವಾಗಿ ನಾವೆಲ್ಲರೂ ಬಸ್ನಲ್ಲಿ ಹಾಗೂ ಕಾರ್ಯಗಳಲ್ಲಿ ದೇವರ ಚಿಕ್ಕನ ಫೋಟೊ ಅಥವಾ ಚಿಕ್ಕ ಮೂರ್ತಿಯನ್ನು ಇಟ್ಟು ಪೂಜೆ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ರೈಲ್ವೇನಲ್ಲಿ ಫೋಟೋ ಇಟ್ಟು ಪೂಜೆ ಮಾಡುವುದು ಕಂಡುಬಂದಿರುವುದು ವಿಶೇಷವಾಗಿದೆ.

ಹೌದು, ವಾರಾಣಸಿ ಹಾಗೂ ಇಂದೋರ್ ನಡುವೆ ಸಂಚರಿಸೋ ಕಾಶಿ ಮಹಾಕಾಳ ಎಕ್ಸ್ಪ್ರೆಸ್ನ ಸೀಟ್ವೊಂದು ಮಿನಿ ದೇವಾಲಯವಾಗಿ ಮಾರ್ಪಾಡಾಗಿದೆ.

ಕಾಶಿ ಮಹಾಕಾಳ ಎಕ್ಸ್ಪ್ರೆಸ್ ಮೂರು ಜ್ಯೋತಿರ್ಲಿಂಗಗಳಾದ ಓಂಕಾರೇಶ್ವರ(ಇಂದೋರ್), ಮಹಾಕಾಳೇಶ್ವರ(ಉಜ್ಜೈನ್) ಹಾಗೂ ಕಾಶಿ ವಿಶ್ವನಾಥ(ವಾರಾಣಸಿ) ನಡುವೆ ಸಂಪರ್ಕ ಕಲ್ಪಿಸುತ್ತದೆ. ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲನ್ನ ಉದ್ಘಾಟನೆ ಮಾಡಿದ್ರು. ಫೆಬ್ರವರಿ 20ರಿಂದ ಎಕ್ಸ್ಪ್ರೆಸ್ ಸಂಚಾರ ಆರಂಭಿಸಲಿದೆ.

ಈ ರೈಲಿನ ಬಿ5 ಕೋಚ್ನ ಸೀಟ್ ನಂಬರ್- 64, ಈಗ ಮಿನಿ ದೇವಾಲಯವಾಗಿ ಮಾರ್ಪಾಡಾಗಿದೆ. ರೈಲು ಸಿಬ್ಬಂದಿ ಇಲ್ಲಿ ಶಿವನ ಫೋಟೋ ಇಟ್ಟು, ಪೂಜೆ ಮಾಡಿದ್ದಾರೆ. ಈ ಸೀಟನ್ನ ಶಿವನಿಗಾಗಿಯೇ ಮೀಸಲಿಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಅಂತ ರೇಲ್ವೆ ಅಧಿಕಾರಿಗಳು ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos