ವಿಶ್ವ ಕಪ್ ಗೆ ರಾಯಚೂರಿನ ಹುಡುಗ ಆಯ್ಕೆ

ವಿಶ್ವ ಕಪ್ ಗೆ  ರಾಯಚೂರಿನ ಹುಡುಗ ಆಯ್ಕೆ

ರಾಯಚೂರು, ಡಿ. 3 : ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್ 19 ಕಿರಿಯರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ರಾಯಚೂರಿನ ಕ್ರಿಕೆಟ್ ಆಟಗಾರ ಆಯ್ಕೆಯಾಗಿದ್ದಾರೆ. ರಾಯಚೂರು ತಾಲೂಕಿನ ಯರಮರಸ್ ಕ್ಯಾಂಪ್ನ ನಿವೃತ್ತ ಕೃಷಿ ಇಲಾಖೆ ಅಧಿಕಾರಿ ಸೋಮಶೇಖರ್ ಪಾಟೀಲ್ ಹಾಗೂ ಕವಿತಾ ದಂಪತಿಗಳ ಪುತ್ರ ವಿದ್ಯಾಧರ್ ಪಾಟೀಲ್ ವಿಶ್ವಕಪ್ ಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
10ನೇ ವಯಸ್ಸಿನಲ್ಲಿಯೇ ರಾಯಚೂರು ಸಿಟಿ ಇಲೆವೆನ್ಸ್ ಕ್ಲಬ್ ಮೂಲಕ ಕ್ರಿಕೆಟ್ ಆರಂಭಿಸಿದ ವಿದ್ಯಾಧರ್ ಬೆಂಗಳೂರಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಇದೇ ವರ್ಷ ಜುಲೈನಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಕಿರಿಯರ ತ್ರಿಕೋನ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos