ಮಾದವಾರ ಕೆರೆ ಉಳಿಸಿ: ಮೋದಿಗೆ ಪತ್ರ

ಮಾದವಾರ ಕೆರೆ ಉಳಿಸಿ: ಮೋದಿಗೆ ಪತ್ರ

ಪೀಣ್ಯ : ನೂರಾರು ವರ್ಷದ ಹಳೆಯ ಕೆರೆ ಉಳಿಸುವಂತೆ ಗ್ರಾಮಸ್ಥರು ಆಗ್ರಹಿಸಿ, ದಿಟ್ಟ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಉತ್ತಮ ಪ್ರತಿಕ್ರಿಯೆಯನ್ನು ಗ್ರಾಮಸ್ಥರು ಪಡೆದಿದ್ದಾರೆ.

ದಾಸರಹಳ್ಳಿ ಸಮೀಪದ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಕೆರೆಯ ಕಥೆ-ವ್ಯಥೆ ಇದಾಗಿದೆ, ಇನ್ನೂ ಸ್ಥಳೀಯ ಅಧಿಕಾರಿಗಳು, ಜಿಲ್ಲಾಧಿಕಾರಿ, ಇಲಾಖೆ ಅಲೆದು ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆರೆ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಸಿಎಂ ಯಡಿಯೂರಪ್ಪಗೆ ಸಹ ಪತ್ರ ಬರೆದಿದ್ದಾರೆ.

ಜಿಂದಾಲ್ ಕಂಪನಿಯ ವಿರುದ್ಧ ಗ್ರಾಮಸ್ಥರ ಅಕ್ರೋಶ ವ್ಯಕ್ತಪಡಿಸಿದ್ದು, ಸುಮಾರು ೧೦ ಎಕರೆಗೂ ಅಧಿಕ ಒತ್ತವರಿಯನ್ನು ಜಿಂದಾಲ್ ಮಾಡಿರುವ ಆರೋಪ ವ್ಯಕ್ತವಾಗಿದೆ. ಇನ್ನೂ ಮಾದಾವರ ಗ್ರಾಮಸ್ಥರಿಂದ ಹಲವು ಬಾರಿ ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ, ಕಳೆದ ಐದಾರು ವರ್ಷದಿಂದ ಹೋರಾಟ ನಡೆಸಿದ್ದಾರೆ.

ಇತ್ತೀಚೀನ ಭಾರಿ ಮಳೆಯಿಂದ ಕೆರೆ ತುಂಬಿದ್ದು, ನೀರುನ್ನು ಕೆರೆಯಿಂದ ಆಚೆಗೆ ಬಿಡದೇ, ಜಿಂದಾಲ್ ಕಂಪನಿ ಕಲುಷಿತ ನೀರು ಕೆರೆ ಒಡಲು ಸೇರದಂತೆ ಗ್ರಾಮಸ್ಥರು ಹೋರಾಟ ನಡೆಸಿದ್ದಾರೆ.ಇನ್ನೂ ಒತ್ತುವರಿ ಮಾಡಿರುವ ಖಾಸಗಿ ಕಂಪನಿಯಿಂದ ತೆರವು ಮಾಡಿಸುವಂತೆ ಪ್ರಧಾನಿಗೆ ಪತ್ರ ಬರೆದು ಪ್ರತಿಕ್ರಿಯೆ ಸಹ ಪಡೆದಿದ್ದಾರೆ. ಕೆರೆ ತುಂಬಿರುವುದರಿಂದ ಸಾವಿರಾರು ರೈತರಲ್ಲಿ ಕುಟುಂಬಕ್ಕೆ ಅನುಕೂಲವಾಗುಲಿದ್ದು, ಕೆರೆ ಉಳಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಚ್ಚಾಶಕ್ತಿ ತೋರುತ್ತಿಲ್ಲಾ ಎಂದು ಹೋರಾಟಗಾರ ತಿಪ್ಪೇನಹಳ್ಳಿ ಕೆರೆ ರಾಮಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos