ಸರ್ವೇಕ್ಷಣ್ ರಂಗೋಲಿ ಹಬ್ಬ ಅಭಿಯಾನ

ಸರ್ವೇಕ್ಷಣ್ ರಂಗೋಲಿ ಹಬ್ಬ ಅಭಿಯಾನ

ಬೆಂಗಳೂರು :  ಮಹಾನಗರ ಪಾಲಿಕೆ ನಾಗವಾರ ವಾರ್ಡ್ ಸಂಖ್ಯೆ-23 ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021 ರ ಅಂಗವಾಗಿ ವೀರಣ್ಣ ಪಾಳ್ಯ ಮೇಲುಸೇತುವೆ ಕೆಳಭಾಗದಲ್ಲಿ ಇಂದು ರಂಗೋಲಿ ಹಬ್ಬವನ್ನು ಆಚರಿಸಲಾಯಿತು.

ಸದರಿ ಹಬ್ಬದಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಕೆ.ಜೆ.ಜಾರ್ಜ್, ವಿಶೇಷ ಆಯುಕ್ತರು(ಘನತ್ಯಾಜ್ಯ) ಡಿ.ರಂದೀಪ್ ರವರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗ ಹಮ್ಮಿಕೊಂಡು ನಾಗರಿಕರಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಈ ಸಂಬಂಧ ಇಂದು ವೀರಣ್ಣ ಪಾಳ್ಯ ಮೇಲುಸೇತುವೆ ಕೆಳಭಾಗದಲ್ಲಿ ಪೌರಕಾರ್ಮಿಕರು, ನಾಗರಿಕರು, ಲಿಂಕ್ ವರ್ಕರ್ಸ್ ಗಳು ಹಾಗೂ ಸ್ವಯಂಸೇವಕರು ಸೇರಿ ಸುಮಾರು 100 ಮಂದಿ ರಂಗೋಲಿ ಹಬ್ಬದಲ್ಲಿ ಪಾಳ್ಗೊಂಡು ವಿವಿಧ ಚಿತ್ತಾರದ ರಂಗೋಲಿಗಳನ್ನು ಬಿಡಿಸಿದ್ದಾರೆ. ರಂಗೋಲಿ ಹಬ್ಬದಲ್ಲಿ ಪಾಲ್ಗೊಂಡವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ವು ಇನ್ನು 2 ತಿಂಗಳು ನಡೆಯಲಿದ್ದು, ಬಿಬಿಎಂಪಿಯು ಉತ್ತಮ ರ‍್ಯಾಂಕ್ ಪಡೆಯಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗಿದೆ. ಅದರಂತೆ ಇಂದು ರಂಗೋಲಿ ಹಬ್ಬವನ್ನು ಆಯೋಜಿಸಲಾಗಿದೆ. ಇದೇ ರೀತಿ ನಗರದಲ್ಲಿ ಸ್ವಚ್ಛತೆ ಕಾಪಾಡಿ ಸ್ವಚ್ಛ ನಗರವನ್ನಾಗಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಪಾಳ್ಗೊಂಡು ನಗರಕ್ಕೆ ಉತ್ತಮ ರ‍್ಯಾಂಕ್ ಪಡೆಯಲು ಸಹಕರಿಸಬೇಕು. ಕಳೆದ ವರ್ಷ 2020ರಲ್ಲಿ ಬಿಬಿಎಂಪಿಗೆ 214 ರ‍್ಯಾಂಕ್ ಬಂದಿದ್ದು, ಈ ಬಾರಿ 2021ರಲ್ಲಿ ಇನ್ನೂ ಉತ್ತಮ ರ‍್ಯಾಂಕ್ ಗಳಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos