ಸರ್ವ ಧರ್ಮ ದೇವಾಲಯವೆ ಸಹಕಾರ ಸಂಘ

ಸರ್ವ ಧರ್ಮ ದೇವಾಲಯವೆ ಸಹಕಾರ ಸಂಘ

ಬೇಲೂರು, ಜ. 30: ಅರೇಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸುಮಾರು 11 ಲಕ್ಷ ಮೌಲ್ಯದಲ್ಲಿ ನೂತನವಾಗಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ ಉಧ್ಘಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೇಲೂರು ವಿಧಾನಸಭಾ ಕ್ಷೇತ್ರದ ಸದಸ್ಯರಾದ ಕೆ. ಎಸ್ ಲಿಂಗೇಶ್ ಸಂಕೀರ್ಣವನ್ನು ಉಧ್ಘಟಿಸಿದರು

ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಹೆಚ್ ಡಿ ಸಿ ಸಿ ಬ್ಯಾಂಕಿನ ನಿರ್ದೆಶಕರಾದ ಎಂ. ಎ ನಾಗರಾಜ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನೆಡೆಸುವುದರಿಂದ ಯಾರಿಗೂ ಲಾಭವಿಲ್ಲ ಅದೇರೀತಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತದ್ದೆ ಎಂಬ ಕಾರಣಕ್ಕೆ ಸಹಕಾರ ಸಂಘಗಳಲ್ಲಿ ವಹಿವಾಟು ನೆಡೆಸುವುದರಿಂದ ಸಂಘದ ಏಳಿಗೆ ಬಯಸುವುದು ಕಷ್ಟ ಆದರಿಂದ ಎಲ್ಲಾ ರೈತರು ಹಾಗೂ ನಾಗರಿಕರು ಸಹಕಾರ ಸಂಘಗಳಲ್ಲಿ ಹೆಚ್ಚಿನ ರೀತಿಯಲ್ಲಿ ವ್ಯವಾಹರಿಸುವುದರ ಮೂಲಕ ಸಹಕಾರ ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಬೆಳೆಸಬೇಕು ಎಂದರು

ಕಾರ್ಯಕ್ರಮದ ಕೊನೆಯಲ್ಲಿ  ಶಾಸಕರಾದ ಕೆ.ಎಸ್ ಲಿಂಗೇಶ್ ಮಾತನಾಡಿ, ಸಹಕಾರ ಸಂಘ ಎನ್ನುವುದು ಸರ್ವ ಧರ್ಮಗಳ ದೇವಾಲಯವಿದಂತೆ ಇಲ್ಲಿ ಯಾವುದೇ ಜಾತಿ ಮತ ಧರ್ಮದ ಭಾವೈಕ್ಯತೆಗೆ ಧಕ್ಕೆಯಾಗದ್ದೆ ಯಾವುದೇ ರಾಜಕೀಯ ಒಳಜಗಳ ಇಲ್ಲದೆ ಒಗ್ಗಟ್ಟಾಗಿ ಇರುವುದರಿಂದ ಇದು ಸಹಕಾರ ಸಂಸ್ಥೆಯಾಗಿದ್ದೆ ಇಲ್ಲದಿದ್ದರೆ ಇದು ಒಂದು ರಾಜಕೀಯ ಕೇಂದ್ರ ವಾಗಿರುತ್ತಿತ್ತು ಎಂದರು.

ಸಹಕಾರ ಸಂಸ್ಥೆಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಸರ್ಕಾರ ರೈತರ ನೆರವಿಗೆ ಸಹಕಾರಿಸುತ್ತಿರುವುದು ನಮ್ಮಿಲ್ಲರಿಗೆ ಸಂತೋಷದಾಯಕ ವಿಚಾರ ಹಾಗಾಗಿ ರೈತರು ಸಹಕಾರ ಸಂಘಗಳಲ್ಲಿ ಹೆಚ್ಚಿನ ವ್ಯವಾಹರಿಸುವುದರ ಮೂಲಕ ಸಂಘಗಳಿಗೆ ಬಲತುಂಬಬೇಕು ಎಂದರು. ಮಲೆನಾಡು ಬಾಗಗಳಲ್ಲಿ ಕಾಫಿ ಮತ್ತು ಕಾಳುಮೆಣಸ ರೈತರು ಹೆಚ್ಚಾಗಿರುವುದರಿಂದ ಸಂಸ್ಥೆಗಳ ಸಾಲ ಸೌಲಭ್ಯ ಸಾಕಗುವುದಿಲ್ಲ ಆದರಿಂದ ಎಲ್ಲಾರು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಅವಲಂಬಿತವಾಗಿ ಹೆಚ್ಚಿನ ಬಡ್ಡಿ ಪಾವತಿಸುತ್ತಿದ್ದಾರೆ ಈಗಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆ ಚರ್ಚಿಸಿ ಶೇ 3 ರ ಬಡ್ಡಿ ದರದಲ್ಲಿ ಹೆಚ್ಚಿನ ಮೊತ್ತವನ್ನು ನೀಡುವಂತೆ ಮನವಿ ಮಾಡಲಾಗುವುದು ಎಂದರು.

ಸಂಘದ ಎಲ್ಲಾ ರೈತರು ನಿರ್ದೇಶಕರು ಅಧ್ಯಕ್ಷರು ಸಹಕಾರದಿಂದ ಸಂಘದ ಆದಾಯ ಮತ್ತು ಸ್ವಂತಕ್ಕೆ ಮಲೆನಾಡು ಭಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ವಾಗಿರುವುದು ಸಂತೋಷ ತರುವಂತಹ ವಿಚಾರ ಇದರ ಸದುಪಯೋಗ ಎಲ್ಲರಿಗೂ ದೊರೆಯಲಿಲ್ಲ ಎಂದು ಶುಭಾಶಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸುಹೀಲ್ ಉರ್ ರೆಹಮಾನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ರತ್ನಮ್ಮ, ಐಸಾಮೇಗೌಡ ಬೇಲೂರು ಎಪಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆಯಾದ ಶ್ರೀಮತಿ ಜಮುನಾ ಅಣ್ಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹುಸ್ನಾ, ಸಹಕಾರ ಸಂಘಗಳ ಉಪನಿಬಂಧಕರಾದ ಲಕ್ಷ್ಮಿ ನಾರಾಯಣ ಎಲ್ಲಾ ನಿರ್ದೇಶಕರುಗಳು ಹಾಗೂ ಸಂಘದ ಸಿಬ್ಬಂದಿ ಮತ್ತು ರೈತರು ಉಪಸ್ಥಿತರಿದರು.

ಫ್ರೆಶ್ ನ್ಯೂಸ್

Latest Posts

Featured Videos