ಸರೋಜಿನಿ ಮಹಿಷಿ ವರದಿಗೆ ಕರವೇ ಒತ್ತಾಯ

 ಸರೋಜಿನಿ ಮಹಿಷಿ ವರದಿಗೆ ಕರವೇ ಒತ್ತಾಯ

ಬೆಂಗಳೂರು, ಡಿ. 5: ಡಾ. ಸರೋಜಿನಿ ಮಹಿಷಿ ವರದಿಯು ಕರ್ನಾಟಕದಲ್ಲಿ ಕನ್ನಡಿಗನೇ ಅಧಿಪತಿಯಾಬೇಕೆಂದು ವರದಿಯ ಮೂಲ ಉದ್ದೇಶವಾಗಿದೆ. ಕರ್ನಾಟಕದಲದಿ ಶೇ. 8೦ ರಷ್ಟು ಹುದ್ದೆಗಳು ಕನ್ನಡಿಗರಿಗೆ  ಸಿಗವಬೇಕು ಎನ್ನುವ ಆಶಯವಿದ್ದರೂ ಸರ್ಕಾರ ಇದರ ಬಗ್ಗೆ  ಮನಸ್ಸು ಮಾಡುತ್ತಿಲ್ಲ ಎಂದು ಹೇಳಿದರು.

ನಗರದ ಪ್ರೆಸ್ ಕ್ಲಬ್ ನ ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ಕರವೇ ಸೆನೆಯ ರಾಜ್ಯಾಧ್ಯಕ್ಷ ಆರ್.ಪಿ. ಗೋಪಾಲರಾಜು ಅವರು  ಕರ್ನಾಟಕದಲ್ಲಿ ನೆಲೆಯೂರಿರುವ ಅನ್ಯರಾಜ್ಯದವರು ಅವರವರ ಭಾಷೆಯನ್ನು ಪ್ರಚುರ ಪಡಿಸುತ್ತಾ ಅವರದೇ  ಸಂಸ್ಕೃತಿಯನ್ನು ಕನ್ನಡ ನೆಲದಲ್ಲಿ ಬೆಳೆಸುತ್ತಿದ್ದರಿಂದ, ಕರ್ನಾಟಕದ ವಿಧ್ಯಾರ್ಥಿಗಳು ನೀರುದ್ಯೊಗಿಗಳಾಗಿ  ಬಿದಿ ಬಿದಿ ಅಲೆದಾಡುವಂತಾಗಿದೆ. ಎಂದು ಹೇಳಿದರು

ಕರ್ನಾಟಕ ಸಂಘಟನೆಗಳ ಒಕ್ಕೂಟ ನವೆಂಬರ್ 4 ರಿಂದ ಮೌರ್ಯ ವೃತ್ತದಲ್ಲಿ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವುದರ ಮೂಲಕ ಕನ್ನಡ ಮಕ್ಕಳಿಗೆ ಉದ್ಯೋಗ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಅನಿರ್ಧಿಷ್ಟಕಾಲ ಮುಷ್ಕರವನ್ನು ಹಮ್ಮಿಕೊಂಡು ಇಂದಿಗೆ 31 ದಿನಗಳನ್ನು  ಯಶಸ್ವಿಯಾಗಿ ಪೂರ್ಣಗೊಳಿಸಿ ಮುಮದುವರಿಯುತ್ತಿದೆ ಎಂದು ಹೇಳಿದರು.

ರಾಜಕಾರಣಿಗಳಾಗಲೀ, ಸಚಿವರಾಗಲೀ ವಿರೋಧ ಪಕ್ಷದ ನಾಯಕರಾಗಲೀ ಯಾರು ಸಹ ವರದಿಯ ಬಗ್ಗೆ ಮನಸ್ಸು ಮಾಡುತ್ತಿಲ್ಲ ಇದರಿಂದಾಗಿ ಕರವೇ ಸೇನೆಯ ರಾಜ್ಯಾಧ್ಯಕ್ಷ ಮತ್ತು ಕರವೇ ಸ್ವಾಭಿಮಾನಿ ಸೇನೆಯ ರಾಜ್ಯಾದ್ಯಕ್ಷ ಲಿಂಗರಾಜು ಗೌಡ ಇವರ ನೇತೃತ್ವದಲ್ಲಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಚಳುವಳಿ ನಾಗೇಶ್ ಮತ್ತು ಪದಾಧಿಕಾರಿಗಳ ಬೆಂಬಲೆದೊಂದಿಗೆ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು  ಒತ್ತಾಯಿಸಿ ಡಿ. 6 ರಂದು  ಬೆಳಗ್ಗೆ 11 ರ ಸಮಯ ಸಾವಿರಾರು ಪದಾಧಿಕಾರಿಗಳೊಡನೆ ಮೌರ್ಯ ವೃತ್ತದಿಂದ ಪಥಸಂಚಲನದೊಂದಿಗೆ ವಿಧಾನಸೌಧವನ್ನು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು .

ಈ ಪ್ರತಿಭಟನೆಯಲ್ಲಿ ಮಠಾಧೀಶರು, ರೈತರಪರ, ದಲಿತರಪರ, ಮಹಿಳಾಪರ, ಕಾರ್ಮಿಕರ ಪರ, ಮತ್ತು ಚಾಲಕ ಸಂಘಟನೆಗಳ ಬೆಂಬಲದೊAದಿಗೆ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos