ಧವನ್ ಬದಲು ಸಂಜು ಸ್ಯಾಮ್ಸನ್ ..?

ಧವನ್ ಬದಲು ಸಂಜು ಸ್ಯಾಮ್ಸನ್ ..?

ಮುಂಬೈ, ನ. 27 : ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧ ಟಿ-20  ಸರಣಿಗೆ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಬದಲು ಸಂಜು ಸ್ಯಾಮ್ಸನ್ ಆಯ್ಕೆಯಾಗುವ ಸಾಧ್ಯತೆ ಇದೆ.
ಸರಣಿಗೆ ತಂಡವನ್ನು ಈಗಾಗಲೆ ಪ್ರಕಟಿಸಲಾಗಿದ್ದು, ಅದರಲ್ಲಿ ಶಿಖರ್ ಸ್ಥಾನ ಪಡೆದಿದ್ದಾರೆ. ಆದರೆ ಸದ್ಯ ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ ಆಡುತ್ತಿರುವ ಧವನ್ ಎಡಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಧವನ್ ಅಲಭ್ಯರಾದರೆ ಆಗ ಸಂಜು ಸಾಮ್ಸನ್ ಅವರನ್ನು ಆಯ್ಕೆಗೆ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos