ಉತ್ತಮ ಆರೋಗ್ಯಕ್ಕೆ ಕುಸುಬೆ ಎಣ್ಣೆ ಸೇವಿಸಿ

ಉತ್ತಮ ಆರೋಗ್ಯಕ್ಕೆ ಕುಸುಬೆ ಎಣ್ಣೆ ಸೇವಿಸಿ

ಕುಸುಬೆ ಎಣ್ಣೆಯು ಆರೋಗ್ಯ ಸಹಕಾರಿಯಾಗಿ ಕೆಲಸ ಮಾಡಬಲ್ಲದು ಎಂಬುದನ್ನು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ. ಕುಸುಬೆ ಬೀಜಗಳಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಹೆಚ್ಚಿನ ಕುದಿ ಬಿಂದು ಹೊಂದಿರುವ ಇದರ ಬಳಕೆ ನಮ್ಮ ಆಹಾರಪದಾರ್ಥಗಳ ತಯಾರಿಕೆಯಲ್ಲಿಯೂ ಸೂಕ್ತವಾದುದು.

ಕುಸುಬೆ ಎಣ್ಣೆಯು ಅಸಂತೃಪ್ತ ಕೊಬ್ಬನ್ನು ಹೊಂದಿರುವಂತಹ ಪದಾರ್ಥ. ಇದರಲ್ಲಿ ಏಕ ಅಸಂತೃಪ್ತ ಕೊಬ್ಬು ಹಾಗೂ ಬಹು ಅಸಂತೃಪ್ತ ಕೊಬ್ಬು ಎರಡೂ ರೀತಿಯ ಕೊಬ್ಬಿನಂಶಗಳಿವೆ. ಇವು ಹಾಮೋನ್ ಸಮತೋಲನಕ್ಕೆ, ನೆನಪಿನ ಶಕ್ತಿಗೆ ಬೇಕಾಗಿರುವಂತಹ ಅಂಶಗಳನ್ನು ಹೊಂದಿರುತ್ತವೆ. ಕೊಬ್ಬಿನಲ್ಲಿ ಕರಗುವಂತಹ ಎ, ಡಿ, ಇ ಮತ್ತು ಕೆ ವಿಟಮಿನ್​ಗಳನ್ನು ದೇಹವು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುವ ಗುಣ ಇದಕ್ಕಿದೆ. ಉರಿಯೂತವನ್ನು ಕಡಿಮೆ ಮಾಡಲು, ಹೃದಯದ ಆರೋಗ್ಯವನ್ನು ಹೆಚ್ಚಿಸಲು ಈ ಎಣ್ಣೆಯ ಬಳಕೆ ಅನುಕೂಲಕಾರಿ.

ಕುಸುಬೆ ಎಣ್ಣೆಯಲ್ಲಿ ಎರಡು ವಿಧ. ಹೈ ಓಲಿಕ್ ಕುಸುಬೆ ಎಣ್ಣೆ ಮತ್ತು ಹೈ ಲಿನೋಲಿಕ್ ಕುಸುಬೆ ಎಣ್ಣೆ. ಹೈ ಲಿನೋಲಿಕ್ ಕುಸುಬೆ ಎಣ್ಣೆಯು ಹೆಚ್ಚಿನ ಪ್ರಮಾಣದಲ್ಲಿ ಬಹುಅಸಂತೃಪ್ತ ಕೊಬ್ಬಿನಂಶವನ್ನು ಹೊಂದಿರುತ್ತದೆ. ಆದ್ದರಿಂದ ಬಿಸಿ ಮಾಡಿ ಬಳಸುವುದಕ್ಕಿಂತ ಹಾಗೆಯೇ ನೇರವಾಗಿ ಪದಾರ್ಥಗಳ ಜೊತೆ ಸೇವಿಸುವುದು ಉತ್ತಮ ಆಯ್ಕೆ. ಹೈ ಓಲಿಕ್ ಕುಸುಬೆ ಎಣ್ಣೆಯು ಏಕ ಅಸಂತೃಪ್ತ ಕೊಬ್ಬಿನಂಶವನ್ನು ಹೊಂದಿದ್ದು ಇದರ ಬಳಕೆ ಎಲ್ಲ ರೀತಿಯಲ್ಲಿಯೂ ಉಪಯುಕ್ತ.

ಏನೇ ಇರಲಿ, ಯಾವುದೇ ರೀತಿಯಲ್ಲಿ ಬಳಸುವುದಾದರೂ ಸಹ ಗಾಣಗಳಲ್ಲಿ ನೇರವಾಗಿ ಕುಸುಬೆ ಬೀಜಗಳಿಂದ ತಯಾರಿಸಿದ ಎಣ್ಣೆಯು ನಮ್ಮ ಆರೋಗ್ಯಕ್ಕೆ ಹಿತ ಎಂದರೆ ತಪ್ಪಾಗಲಾರದು. ಇದು ದೇಹಕ್ಕೆ ಯಾವ ಯಾವ ರೀತಿಯ ಪ್ರಯೋಜನಗಳನ್ನು ತಂದುಕೊಡಬಲ್ಲದು ಎಂಬುದನ್ನು ಮುಂದಿನ ಅಂಕಣದಲ್ಲಿ ತಿಳಿದುಕೊಳ್ಳೋಣ.

ಫ್ರೆಶ್ ನ್ಯೂಸ್

Latest Posts

Featured Videos