ಎಸ್ ಸಚಿವ ಭೇಟಿ ನೀಡಿದ್ದಾರೆ

  • In State
  • August 4, 2020
  • 178 Views
ಎಸ್ ಸಚಿವ ಭೇಟಿ ನೀಡಿದ್ದಾರೆ

ಕೊಪ್ಪಳ  : ತಾಲೂಕಿನ ವೋರ್ಲಾ ಗ್ರಾಮದ ಆದರ್ಶ ಎಂಬ ಹತ್ತನೇ ತರಗತಿ ವಿದ್ಯಾರ್ಥಿ, ಸಂವಾದದ ಮೂಲಕ ಸೌಕರ್ಯ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದಿದೆ.

ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಇಂಟರ್ ನೆಟ್ ಕನೆಕ್ಷನ್ ಕನಸಾಗಿದೆ. 5 ಕಿಲೋ ಮೀಟರ್ ಮಣ್ಣು ರಸ್ತೆಯಲ್ಲಿ ನಡೆದು ಶಾಲೆಗೆ ತೆರಳಬೇಕಾಗಿದೆ ಎಂದು ವಿದ್ಯಾರ್ಥಿ ಸಚಿವರ ಬಳಿ ಅಳಲು ತೋಡಿಕೊಂಡಿದ್ದ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪಳ ತಾಲೂಕಿನ ನಕ್ಸಲ್ ಪೀಡಿತ ಹಳ್ಳಿಯೊಂದಕ್ಕೆ ಭೇಟಿ ನೀಡಲಿದ್ದಾರೆ.

ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಕೊಪ್ಪಳ ತಾಲೂಕಿನ ಬಿಇಒ ಆದರ್ಶ ಮನೆಗೆ ಭೇಟಿ ನೀಡಿ, ಕುಟುಂಬದ ಪರಿಸ್ಥಿತಿ, ರಸ್ತೆ, ಮೊಬೈಲ್ ಸಂಪರ್ಕತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos