ರೋಹಿಣಿ ಮುಂದ್ರ ಪುಸ್ತಕ “ದಿ 1% ಕ್ಲಬ್”

  • In State
  • September 16, 2019
  • 422 Views
ರೋಹಿಣಿ ಮುಂದ್ರ ಪುಸ್ತಕ “ದಿ 1% ಕ್ಲಬ್”

ಯಶವಂತಪುರ, ಸೆ. 16: ಅತ್ಯುತ್ತಮ ಭಾಷಣಕಾರ್ತಿಯಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶೇಷ ವಿಚಾರ ಸಂಕಿರಣಗಳ ಮೂಲಕ ಪ್ರಖ್ಯಾತಿಯಾಗಿರುವ ರೋಹಿಣಿ ಮುಂಡ್ರಾ ತನ್ನ ಮೊದಲ ಪುಸ್ತಕ “ದಿ 1% ಕ್ಲಬ್” ಅನ್ನು ಬಿಡುಗಡೆ ಮಾಡಿದರು. ಈ ಮೂಲಕ ಉದಯೋನ್ಮುಖ ಲೇಖಕಿಯಾಗಿ ಹೊರಹೊಮ್ಮಿದ್ದು, ಇದು ಇವರ ಸಾಧನೆಯ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿದೆ.

ರೋಹಿಣಿ ಮುಂದ್ರ ರವರ ಪುಸ್ತಕವನ್ನು ರಾಜ್ಯೋತ್ಸವ  ಪ್ರಶಸ್ತಿ ವಿಜೇತ ಕಾರ್ಯಕರ್ತ ಡಾ.ಅಕ್ಕೈ ಪದ್ಮಶಾಲಿ ಅನಾವರಣಗೊಳಿಸಿದರು ಮತ್ತು ಈ ಸಮಾರಂಭದಲ್ಲಿ ಶ್ರೀ.  ಕರುಣಾ ವಿಜಯಕುಮಾರ್ ಜೈನ್, (ಭಾರತೀಯ  ಅಂತರರಾಷ್ಟ್ರೀಯ ಕ್ರಿಕೆಟಿಗ) ರವರು ರೋಹಿಣಿ ಮುಂದ್ರ ಅವರ ಪುಸ್ತಕ ಮತ್ತು ಅವರು ನಡೆದುಬಂದ ದಾರಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕೆಪಿಸಿಸಿಯ ಅತ್ಯುತ್ತಮ ಶಿಕ್ಷಣ ತಜ್ಞ ಮತ್ತು ಪ್ರಧಾನ ಕಾರ್ಯದರ್ಶಿ ಅಗಾ ಸುಲ್ತಾನ್ ಸಹ ಈ ಪುಸ್ತಕ ಬಿಡುಗಡೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಡಾ.ಅಕ್ಕೈ ಪದ್ಮಶಾಲಿಯವರು ರೋಹಿಣಿ ರವರ ಈ ಪ್ರಯತ್ನವನ್ನು ಶ್ಲಾಘಿಸಿದರು.  ಆರಂಭಿಕ ಹಂತಗಳಲ್ಲಿನ ತನ್ನ ವೈಫಲ್ಯಗಳನ್ನು ಅನುಭವಗಳಾಗಿ ಪರಿವರ್ತಿಸಿ ಓದುಗರಿಗೆ ಅವರ ವೃತ್ತಿಜೀವನವನ್ನು ರೂಪಿಸಕೊಳ್ಳಲು ಪ್ರೇರಣೆ ನೀಡುವಂತಹ ಬರಹಗಳನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ನುಡಿದರು. ಈ ಸಮಾರಂಭದಲ್ಲಿ ಅವರು ತಮ್ಮ ಆರ್ ಎಂ  ಫೌಂಡೇಶನ್ ಅನ್ನು ಉದ್ಘಾಟಿಸಿದರು.  ತನ್ನ ಆರ್‌ಎಂ ಫೌಂಡೇಶನ್ ಸಮಾಜದ ದೀನ ದಲಿತರಿಗಾಗಿ ಕೆಲಸ ಮಾಡುತ್ತದೆ ಎಂದು ಅವರು ಅಧಿಕೃತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.  ಒಟ್ಟು ಆದಾಯದ 40% ಆರ್‌ಎಂ ಫೌಂಡೇಶನ್‌ಗೆ ದೇಣಿಗೆ ನೀಡುವುದಾಗಿ ಅವರು ಘೋಷಿಸಿದರು. ರೋಹಿಣಿ ತನ್ನ ಕುಟುಂಬ ಮತ್ತು ತಂಡದ ಸದಸ್ಯರನ್ನು ನೆನಪಿಸಿಕೊಳ್ಳುತ್ತಾ ಪೋಷಕರಿಗೆ ವಿಶೇಷ ಧನ್ಯವಾದಗಳನ್ನು ಈ ಸಮಾರಂಭದ ಮೂಲಕ ತಿಳಿಸಿದರು. ಒಂದು ಒಳ್ಳೆಯ ಪುಸ್ತಕ 100 ಸ್ನೇಹಿತರಿಗೆ ಸಮಾನವಾಗಿರುತ್ತದೆ ಎಂದು ಈ ಸಂದರ್ಭದಲ್ಲಿ ನುಡಿದರು.

ಫ್ರೆಶ್ ನ್ಯೂಸ್

Latest Posts

Featured Videos