ನಾಗರೀಕರ ಅಲೆದಾಟ ತಪ್ಪಿಸಲು ಕಂದಾಯ ಅದಾಲತ್

ನಾಗರೀಕರ ಅಲೆದಾಟ ತಪ್ಪಿಸಲು ಕಂದಾಯ ಅದಾಲತ್

ಕೋಲಾರ: ನಾಗರಿಕರು ತಾಲ್ಲೂಕು ಕೇಂದ್ರಕ್ಕೆ ಬರುವುದಕ್ಕೆ ಕಷ್ಟ ಎಂದು ಭಾವಿಸಿ ನ್ಯಾಯಾಲಯದ ಅದೇಶಗಳಿಗೆ ಸಂಬಂಧಿಸಿದಂತೆ ೭ ವಿದದ ತಿದ್ದುಪಡಿಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮ ತಿಳಿಸಿದರು
ಮಾಲೂರು ತಾಲ್ಲೂಕಿನ ಟೇಕಲ್‌ನ ನಾಡಕಛೇರಿ ಆವರಣದಲ್ಲಿ ಸೋಮವಾರ ಹೋಬಳಿ ವ್ಯಾಪ್ತಿಯ ಕಂದಾಯ ಮತ್ತು ಪಿಂಚಣಿ ಆದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು ೨.೫ ಲಕ್ಷಕ್ಕೂ ಹೆಚ್ಚು ಮಂದಿ ಪಿಂಚಣಿದಾರರಿದ್ದಾರೆ. ಸಾರ್ವಜನಿಕರಿಂದ ಸ್ವಿಕರಿಸಿದ ವಿವಿಧ ರೀತಿಯ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ಕ್ರಮವಹಿಸಿ ಒಂದು ತಿಂಗಳೊಳಗೆ ಪರಿಹಾರ ಒದಗಿಸಲಾಗುವುದು ಎಂದರು.
ಪಿಂಚಣಿಗಳಿಗೆ ಸಂಬಂಧಿಸಿದ ೧೨೬ ಅರ್ಜಿಗಳು, ಪೌತಿ ಖಾತೆಗೆ ಸಂಬಂಧಿಸಿದ ೧೧೨ ಅರ್ಜಿಗಳು, ಹಳೆಯ ಕ್ರಯಪತ್ರ ತಿದ್ದುಪಡಿಗೆ ಸಂಬಂಧಿಸಿದ ೧೬ ಅರ್ಜಿಗಳು, ಪಹಣಿ ತಿದ್ದುಪಡಿಗೆ ಸಂಬಂಧಿಸಿದ೩೯ ಅರ್ಜಿಗಳು, ನ್ಯಾಯಾಲಯದ ಅದೇಶಗಳಿಗೆ ಸಂಬಂಧಿಸಿದ ೧೧ ಅರ್ಜಿಗಳು ಸೇರಿದಂತೆ ಒಟ್ಟು ೩೦೪ ಅರ್ಜಿಗಳು ಬಂದಿದ್ದು ಇದರಲ್ಲಿ ೧೨೬ ಪಿಂಚಣಿ ಅರ್ಜಿಗಳಲ್ಲಿ ೧೦೪ ಅರ್ಜಿಗೆ ಆದೇಶ ಪ್ರತಿಗಳನ್ನು ವಿತರಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ ಮಾತನಾಡಿ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿ ಯೋಜನೆ, ಮೈತ್ರಿ ಯೋಜನೆಗಳಿಗೆ ಪ್ರಮಾಣ ಪತ್ರಗಳನ್ನು ಮಾಡಿಸಿಕೊಳ್ಳಲು ನಾಗರಿಕರು ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕಂದಾಯ ಮತ್ತು ಪಿಂಚಣಿ ಆದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನ್ಯಾಯಾಲಯ ಆದೇಶದಂತೆ ಖಾತೆಗಳನ್ನು ತಿದ್ದುಪಡಿ, ಪಹಣಿ ತಿದ್ದುಪಡಿ, ಪೌತಿ ವರಸೆ ಖಾತೆ, ಹಳೆಯ ಕ್ರಯಪತ್ರ ತಿದ್ದುಪಡಿ ಈ ಎಲ್ಲಾ ಅಂಶಗಳನ್ನು ಆಧರಿಸಿ ಕಂದಾಯ ಮತ್ತು ಪಿಂಚಣಿ ಆದಾಲತ್ ಮಾಡಲಾಗುತ್ತಿದೆ. ಅದರಂತೆ ಕಂದಾಯ ಇಲಾಖೆ ಶೇ ೮೦-೯೦ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos