ಅಂಬೇಡ್ಕರ್ ಒಂದೇ ಸಮುದಾಯಕ್ಕೆ ಸಂವಿಧಾನ ಬರೆದಿಲ್ಲ

  • In State
  • August 10, 2020
  • 20 Views
ಅಂಬೇಡ್ಕರ್ ಒಂದೇ ಸಮುದಾಯಕ್ಕೆ ಸಂವಿಧಾನ ಬರೆದಿಲ್ಲ

ಮುದ್ದೇಬಿಹಾಳ:ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದೇ ಸಮುದಾಯಕ್ಕೆ ಸಂವಿಧಾನ ಬರೆದಿಲ್ಲ. ಎಲ್ಲ ಜಾತಿ, ಮತ, ಪಂಗಡಗಳಿಗೆ ಅನ್ವಯವಾಗುವಂತೆ ಸಮಾನತೆಯ ಸಂವಿಧಾನ ರಚಿಸಿದ್ದರಿಂದಲೇ ಕೆಳಹಂತದಲ್ಲಿ ಜಾತಿಗಳಿಗೆ ನ್ಯಾಯ ದೊರಕುವುದಕ್ಕೆ ಸಾಧ್ಯವಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಹೇಳಿದರು.
ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಭಾನುವಾರ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ತಾಲೂಕಾ ಘಟಕದಿಂದ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಹಕ್ಕಿಗಾಗಿ ನಾವು ಹೋರಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಸಂವಿಧಾನ ಬದ್ಧವಾಗಿ ದೊರೆತಿರುವ ಮೀಸಲಾತಿಯ ಸೌಲಭ್ಯವನ್ನು ಮತ್ತೊಬ್ಬರು ಕಬಳಿಸುವ ಮೂಲಕ ಅನ್ಯಾಯವಾಗುತ್ತಿರುವ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ನ್ಯಾಯವಾದಿ ಕೆ.ಬಿ.ದೊಡಮನಿ ಮಾತನಾಡಿ, ಭಾರತ ದೇಶಕ್ಕಾಗಿ ವೈರಿ ಆಗಿದ್ದಾರೋ ಅವರೆಲ್ಲ ನನ್ನನ್ನು ಓದಿಕೊಂಡಿದ್ದಾರೆ. ನನ್ನ ಜನ ನನ್ನನ್ನು ಅರ್ಥ ಮಾಡಿಕೊಂಡಿಲ್ಲ. ಹಿಂದುಳಿದ ಜನಾಂಗ ಆಳುವ ವರ್ಗವಾಗಬೇಕು ಎಂಬ ಆಶಯವನ್ನು ಡಾ.ಅಂಬೇಡ್ಕರ್ ಅವರು ಹೊಂದಿದ್ದರು ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ, ನಿವೃತ್ತ ಶಿಕ್ಷಕ ಕೆ.ಬಿ.ಇಬ್ರಾಹಿಂಪೂರ, ಎಸ್.ಬಿ.ಮುದೂರ, ಎಂ.ಬಿ.ಚಲವಾದಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಕಟ್ಟಿಮನಿ, ಆರ್.ವಾಯ್.ದಾಸರ ಇದ್ದರು.
ನಿವೃತ್ತರಾದ ಆರ್.ಎಂ.ಕುAದರಗಿ, ಕೆ.ಬಿ.ದೊಡಮನಿ, ವೈ.ಎಚ್.ಕಾನ್ನಾಳ, ಎಚ್.ಎನ್.ಕಟ್ಟೀಮನಿ ಅವರನ್ನು ಸನ್ಮಾನಿಸಲಾಯಿತು

ಫ್ರೆಶ್ ನ್ಯೂಸ್

Latest Posts

Featured Videos