ಕೇರಳ,ಕರ್ನಾಟಕದಲ್ಲಿ ನೆಲೆಸುವ ದೇವಿ!

ಕೇರಳ,ಕರ್ನಾಟಕದಲ್ಲಿ ನೆಲೆಸುವ ದೇವಿ!

ನ. 27 : ಪಾರ್ವತಿಯ ಅವತಾರವಾದ ಶಕ್ತಿ, ದುರ್ಗೆ, ಕಾಳಿ, ಅಂಬಿಕೆ ಎಂತೆಲ್ಲ ಕರೆಯಲ್ಪಡುತ್ತಾಳೆ ದೇವಿ. ದಂತ ಕಥೆಯೊಂದರ ಪ್ರಕಾರ, ಈ ದೇವಿಯು ಬೆಳಿಗ್ಗೆಯ ಸಮಯದಲ್ಲಿ ಕೇರಳದ ಒಂದು ಪ್ರಸಿದ್ಧ ದೇವಾಲಯದಲ್ಲಿ ಭಕ್ತರನ್ನು ಹರಸಿ ನಂತರದ ಸಮಯದಲ್ಲಿ ಕರ್ನಾಟಕದಲ್ಲಿರುವ ತನ್ನ ತವರು ನೆಲೆಗೆ ಬಂದು ನೆಲೆಸುತ್ತಾಳೆ. ಹಾಗಾಗಿ ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ರಾಜ್ಯದಿಂದಲೂ ಸಹ ಭಕ್ತಾದಿಗಳು ಈಕೆಯ ದರ್ಶನ ಕೋರಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಷ್ಟೆ ಅಲ್ಲ, ಗಾನ ಗಂಧರ್ವ ನಾಮಾಂಕಿತ, ಕೇರಳದ ಮಲಯಾಳಂ ಭಾಷೆಯ ಸಾಂಸ್ಕೃತಿಕ ಪ್ರತಿನಿಧಿ ಎಂದೆ ಬಿಂಬಿತವಾಗಿರುವ, ಅದ್ಭುತ ಸಂಗೀತಗಾರ ಹಾಗೂ ಗಾಯಕ ಕೆ.ಜೆ ಯೇಸುದಾಸ್ ಅವರೂ ಸಹ ಈ ದೇವಿಯ ಅಭಿಮಾನಿ. ಹಾಗಾದರೆ, ಬಹುಶಃ ನಿಮಗೂ ಗೊತ್ತಾಗಿರಬೇಕಲ್ಲವೆ ಈ ದೇವಿ ಯಾರು ಹಾಗೂ ಈಕೆ ನೆಲೆಸಿರುವ ಈ ಕ್ಷೇತ್ರ ಯಾವುದೆಂದು? ಹೌದು, ಇದು ಪರಮ ಪವಿತ್ರ ದೇವಿಯಾದ ದೇವಿ ಮೂಕಾಂಬಿಕಾ ಹಾಗೂ ಈಕೆ ನೆಲೆಸಿರುವ ಶ್ರೀಕ್ಷೇತ್ರವೆ ಕೊಲ್ಲೂರು. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿ ಕರ್ನಾಟಕದಲ್ಲೆ ಸಾಕಷ್ಟು ಪ್ರಸಿದ್ಧಿಯನ್ನು ಗಳಿಸಿದೆ. ಪ್ರಸ್ತುತ ಲೇಖನದ ಮೂಲಕ ಈ ದೇವಿಯು ಬೆಳಗಿನ ಸಮಯದಲ್ಲಿ ತೆರಳುವ ಕೇರಳದ ದೇವಾಲಯ ಹಾಗೂ ಕರ್ನಾಟಕದ ಮೂಕಾಂಬಿಕೆಯ ದೇವಾಲಯ ಮತ್ತು ಕ್ಷೇತ್ರಗಳ ಕುರಿತು ಮಾಹಿತಿ ನೀಡುತ್ತದೆ. ಅವಕಾಶ ದೊರೆತರೆ ಒಮ್ಮೆ ಖಂಡಿತವಾಗಿಯೂ ಈ ಎರಡೂ ದೇವಾಲಯಗಳಿಗೊಮ್ಮೆ ಭೇಟಿ ನೀಡಿ. ಮೂಕಾಂಬಿಕಾ ಸನ್ನಿಧಿ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಶ್ರೀಕ್ಷೇತ್ರವು ತನ್ನಲ್ಲಿರುವ ಪಾರ್ವತಿಯ ಅವತಾರವಾದ ಮೂಕಾಂಬಿಕೆಯ ದೇವಿಯ ಸನ್ನಿಧಿಯಿಂದಾಗಿ ಸಾಕಷ್ಟು ಮಹತ್ವಗಳಿಸಿದೆ. ವರ್ಷಪೂರ್ತಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಿಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಹೇಗೆ ತಲುಪಬಹುದು?

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಚಿಕ್ಕ ದೇವಾಲಯ ಪಟ್ಟಣವಾದ ಕೊಲ್ಲೂರು ಕುಂದಾಪುರ ತಾಲೂಕು ಕೇಂದ್ರದಿಂದ 38 ಕಿ.ಮೀ, ಉಡುಪಿ ನಗರ ಕೇಂದ್ರದಿಂದ 75 ಕಿ.ಮೀ ಹಾಗೂ ಬೆಂಗಳೂರಿನಿಂದ 458 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಬೆಂಗಳೂರಿನಿಂದ ಮೂಕಾಂಬಿಕಾ ರಸ್ತೆಯವರೆಗೆ ರೈಲು ಲಭ್ಯವಿದ್ದು, ಬೆಂಗಳೂರು, ಉಡುಪಿ ಹಾಗೂ ಕುಂದಾಪುರಗಳಿಂದ ಬಸ್ಸುಗಳೂ ಸಹ ದೊರೆಯುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos