ಬಳ್ಳಾರಿ: ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಅವರಿಗೆ ದಿನಕಳದಂತೆ ಕಾನೂನಿನ ಸಂಕಷ್ಟ ಎದುರಾಗುತ್ತಿದ್ದು, ನಟ ದರ್ಶನ್ ವಿರುದ್ಧ ಬಗೆದಷ್ಟು ಸಾಕ್ಷಿಗಳು ಹೆಚ್ಚಾಗಿ ದೊರೆಯುತ್ತಿರುವುದರಿಂದ ದರ್ಶನ್ ಅವರಿಗೆ ಬಿಡುಗಡೆ ಭಾಗ್ಯ ಸದ್ಯಕ್ಕೆ ಇಲ್ಲ ಎಂಬಂತಾಗಿದೆ.
ಇನ್ನು ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಕೇವಲ ಕುಟುಂಬದವರಿಗೆ ಮಾತ್ರ ಅವಕಾಶ ಇದ್ದು, ಈಗಾಗಲೇ ಅವರ ಪತ್ನಿ ವಿಜಯಲಕ್ಷ್ಮಿ ಅವರು ಭೇಟಿಯಾಗುತ್ತಿದ್ದು ಇದರ ನಡುವೆ ದರ್ಶನ್ ಅವರು ತುರ್ತಾಗಿ ಅವರ ತಾಯಿಯನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಕುಟುಂಬದವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಅವರು 5 ನಿಮಿಷಗಳ ಕಾಲ ಮಾತನಾಡಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆಯೇ ಪತ್ನಿ ಜೊತೆ ಅವರು ಚರ್ಚೆ ಮಾಡಿದ್ದಾರೆ. ಪತ್ನಿ ಜೊತೆ ಮಾತನಾಡುವಾಗ ಅವರು ಭಾವುಕರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಆರೋಪಗಳು ಗಂಭೀರ ಆಗಿರುವುದರಿಂದ ದರ್ಶನ್ಗೆ ಜಾಮೀನು ಸಿಗುವುದು ಕಷ್ಟ ಇದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಕೇವಲ 5 ನಿಮಿಷ ಫೋನ್ ಕಾಲ್ನಲ್ಲಿ ಮಾತನಾಡಲು ದರ್ಶನ್ಗೆ ಸಾಧ್ಯವಾಗಿಲ್ಲ. ಆದ್ದರಿಂದ ಪತ್ನಿ ಮತ್ತು ತಾಯಿ ಜೊತೆ ನೇರವಾಗಿ ಮಾತನಾಡಲು ಅವರು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಉದ್ಯಮವೂ ಇಲ್ಲ, ಉದ್ಯೋಗವೂ ಇಲ್ಲ: ಬಿಜೆಪಿ
ನಾಳೆಯೇ (ಸೆಪ್ಟೆಂಬರ್ 11) ಜೈಲಿಗೆ ಬರುವಂತೆ ಪತ್ನಿಗೆ ದರ್ಶನ್ ತಿಳಿಸಿದ್ದಾರೆ. ಈ ಬಗ್ಗೆ ದರ್ಶನ್ ಕುಟುಂಬಸ್ಥರು ಬಳ್ಳಾರಿಯ ಜೈಲಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ತಾಯಿ ಮೀನಾ ಕೂಡ ಬರುವುದಾಗಿ ಮಾಹಿತಿ ನೀಡಿದ್ದಾರೆ. ದರ್ಶನ್ ಕುಟುಂಬದವರು ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಅದೇನೆ ಆಗಲಿ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಇದೀಗ ಮಾಡಿದ ತಪ್ಪಿಗೆ ದರ್ಶನ್ ಅವರು ಪಶ್ಚತಾಪ ಪಡುವುದರ ಜೊತೆಗೆ ಶಿಕ್ಷೆಯನ್ನು ಕೂಡ ಅನುಭವಿಸುತ್ತಿದ್ದಾರೆ.