ಮಕ್ಕಳ ದತ್ತು ಪಡೆಯಲು ಮನವಿ

ಮಕ್ಕಳ ದತ್ತು ಪಡೆಯಲು ಮನವಿ

ನೆಲಮಂಗಲ: ಸಮಾಜದಲ್ಲಿ ಸಂಕಷ್ಟದಲ್ಲಿರುವ ಬಡ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಭವಿಷ್ಯ ಉಜ್ವಲಗೊಳಿಸಲು ಪ್ರಜ್ಞಾವಂತರು ಕೈಜೋಡಿಸಬೇಕು ಎಂದು ಹೈಕೋರ್ಟ್ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಎಚ್ ವೆಂಕಟೇಶ್ ದೊಡ್ಡೇರಿ ಮನವಿ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಯಾದಗಿರಿ ಮೂಲದ ಶಾಣಪ್ಪ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ಮಗಳಿಗೆ ಎಚ್. ವೆಂಕಟೇಶ್ ದೊಡ್ಡೇರಿ ಅವರು ಉಚಿತ ಶಿಕ್ಷಣ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆಲಮಂಗಲ ಹರ್ಷ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮಾಲೀಕ ಶಿವಕುಮಾರ್ ಅವರು ಶಾಣಪ್ಪ ನವರ ಮಗಳಿಗೆ ೧೨ನೇ ತರಗತಿವರೆಗೆ ಉಚಿತ ಶಿಕ್ಷಣವನ್ನು ತಮ್ಮ ಸಂಸ್ಥೆಯಲ್ಲಿ ನೀಡಲು ಮುಂದೆ ಬಂದಿದ್ದಾರೆ.
ಈ ವರ್ಷ ಇಂತಹ ಸುಮಾರು ೨೫ ಮಕ್ಕಳನ್ನು ದೊಡ್ಡೇರಿ ಪ್ರತಿಷ್ಠಾನದ ಮೂಲಕ ಗುರುತಿಸಿದೆ. ದತ್ತು ಸಹೃದಯರು ಬಡ ಕುಟುಂಬಗಳ ಮಕ್ಕಳನ್ನು ದತ್ತು ಪಡೆದು ಅವರ ಬದುಕನ್ನು ಉಜ್ವಲ ಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಆಸಕ್ತರು ಎಚ್ ವೆಂಕಟೇಶ್ ದೊಡ್ಡೇರಿ (ಮೊ. 9900456379) ಅಧ್ಯಕ್ಷರು, ರೋಟರಿ ಯಶವಂತಪುರ, ಎಚ್ ವೆಂಕಟೇಶ್, ದೊಡ್ಡೇರಿ ಪ್ರತಿಷ್ಠಾನ ನಂ.೧, ಮಾಧವ ನಗರ ಬೆಂಗಳೂರು ೧ ಇಲ್ಲಿ ಸಂಪರ್ಕಿಸಬಹುದು.

ಫ್ರೆಶ್ ನ್ಯೂಸ್

Latest Posts

Featured Videos